Play Store
Facebook
Twitter
Instagram
YouTume
info@kstdc.co | 080-4334 4334
Page Banner

ಕರ್ನಾಟಕ

ಕರ್ನಾಟಕ ಅದ್ಭುತ ಅನುಭವವನ್ನು ಪೂರೈಸುವ
ಒಂದು ಗಮ್ಯಸ್ಥಾನ.

ಕರ್ನಾಟಕವನ್ನು ಅನ್ವೇಷಿಸಿದರೆ, ಜಗತ್ತು ಒಂದು ಸುಂದರವಾದ ಪ್ರವಾಸಿ ತಾಣವಾಗಿದೆ. ಇಲ್ಲಿನ ಪ್ರತಿ ಗಮ್ಯಸ್ಥಾನವು ಪ್ರವಾಸಿಗರಿಗೆ ಸ್ವರ್ಗೀಯ ಅನುಭವವನ್ನು ನೀಡುತ್ತದೆ ಮತ್ತು ನೀವು ಸ್ವರ್ಗದಂತಿರುವ ಭೂಮಿಗೆ ಕಾಲಿಡಲು ಬಯಸಿದರೆ, ನಾವು ನಿಮ್ಮನ್ನು ಕರ್ನಾಟಕಕ್ಕೆ ಆಹ್ವಾನಿಸುತ್ತೇವೆ.

 

ಬಯಲು ಪ್ರದೇಶಗಳು, ಎತ್ತರದ ಪರ್ವತಗಳು, ಕಣಿವೆಗಳು, ನದಿಗಳು, ಪ್ರಾಚೀನ ದೇವಾಲಯಗಳು, ನಿತ್ಯಹರಿದ್ವರ್ಣ ಕಾಡುಗಳು, ಉದ್ಯಾನಗಳು, ಕಾಫಿ ತೋಟಗಳೆಲ್ಲವನ್ನೂ ಒಳಗೊಂಡಿರುವ ಕರ್ನಾಟಕವನ್ನು ಅನುಭವಿಸಲು ಸಾಧ್ಯವಿಲ್ಲ, ಬದಲಾಗಿ ಅದನ್ನು ಬದುಕಬೇಕು. ಭಾರತದ ಅತ್ಯುತ್ತಮ ಪ್ರವಾಸೋದ್ಯಮ ತಾಣವಾದ ಕರ್ನಾಟಕಕ್ಕೆ ನಿಮ್ಮನ್ನು ಕರೆದೊಯ್ಯುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ.

 ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆ.ಎಸ್.ಟಿ.ಡಿ.ಸಿ) ದಿನಾಂಕ: 06.02.1971 ರಂದು ಸ್ಥಾಪನೆಗೊಂಡ ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಒಂದು ಅಂಗಸಂಸ್ಥೆಯಾಗಿದೆ. ನಿಗಮವು ರಾಜ್ಯಕ್ಕೆ ಭೇಟಿ ನೀಡುವ ದೇಶೀಯ ಹಾಗೂ ಅಂತರ್ರಾಷ್ಟ್ರೀಯ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ವಸತಿ, ಸಾರಿಗೆ, ಪ್ರವಾಸ ಪ್ಯಾಕೇಜುಗಳು ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಸೇವೆಗಳನ್ನು ಒದಗಿಸುತ್ತದೆ.

ಮುನ್ನೋಟ

ನಿಗಮವು ರಾಜ್ಯದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕøತಿ, ಪರಂಪರೆ ಹಾಗೂ ರಮಣೀಯ ನಿಸರ್ಗತಾಣಗಳ ಪರಿಚಯ ಮಾತ್ರವಲ್ಲದೆ, ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ, ರಾಜ್ಯಕ್ಕೆ ಭೇಟಿ ನೀಡುವ ದೇಶೀಯ ಹಾಗೂ ಅಂತರ್ರಾಷ್ಟ್ರೀಯ ಪ್ರವಾಸಿಗರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಸ್ಮರಣೀಯ ಪ್ರಯಾಣವನ್ನು ಖಾತರಿಪಡಿಸುತ್ತದೆ.

ಉದ್ದೇಶಗಳು

  • ಪ್ರವಾಸಿಗರು ಮತ್ತು ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದು.
  • ಕರ್ನಾಟಕ ರಾಜ್ಯ ಮತ್ತು ಇತರೆಡೆಗಳಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ನಿರ್ವಹಣೆ.
  • ಪ್ರವಾಸೋದ್ಯಮದ ಉತ್ತೇಜನಕ್ಕೆ ಅವಶ್ಯವಿರುವ ಎಲ್ಲಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು.
  • ಪ್ರವಾಸೋದ್ಯಮದ ಅಭಿವೃಧ್ಧಿಗೆ ಪೂರಕವಾಗುವಂತೆ ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಯಾತ್ರಿ ನಿವಾಸಗಳು, ಪ್ರವಾಸಿ ಮಂದಿರಗಳು, ಕಾಟೇಜುಗಳು, ಕ್ಯಾಂಟೀನ್ಗಳು ಇತ್ಯಾದಿಗಳನ್ನು ನಿಗಮದ ಸುಪರ್ದಿಗೆ ತೆಗೆದುಕೊಳ್ಳುವುದು ಹಾಗೂ ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವುದಲ್ಲದೇ, ನಿಗಮವು ರಾಜ್ಯದ ವಿವಿಧ ಪ್ರವಾಸಿತಾಣಗಳನ್ನು ತಲುಪಲು ಪ್ರವಾಸಿಗರ ಆಯ್ಕೆಯಂತೆ ಕಸ್ಟಮೈಸ್ಡ್ ಪ್ರವಾಸಗಳನ್ನು ಸಹ ಪ್ರಾರಂಭಿಸಿರುತ್ತದೆ.
  • ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ರವಾಸಿ ಏಜೆಂಟರು ಮತ್ತು ಗುತ್ತಿಗೆದಾರರು ತಮ್ಮ ಕಾರ್ಯವನ್ನು ಮುಂದುವರೆಸಲು ನಿಗಮವು ಆಧುನಿಕ ಯುಗದಲ್ಲಿ ಲಭ್ಯವಿರುವ ಎಲ್ಲಾ ವಿಧಾನಗಳಲ್ಲಿ ಟಿಕೇಟ್, ಆಸನಗಳು, ಬರ್ತ್ಗಳು, ಹೋಟೆಲ್ಗಳ ಕಾಯ್ದಿರಿಸುವಿಕೆ, ಮಾರ್ಗದರ್ಶಕರ ಸೌಲಭ್ಯ, ವಿಮೆ, ಗೃಂಥಾಲಯ ಸೇರಿದಂತೆ ವಿಚಾರಣಾ ಕೇಂದ್ರಗಳ ಕಾರ್ಯಾಚರಣೆಯನ್ನು ಹೊಂದಿರುತ್ತದೆ.
  • ಹೋಟೆಲ್ ಕೀಪರ್ಸ್, ರೆಸ್ಟೋರೆಂಟ್, ರೈಲ್ವೆ, ಶಾಪಿಂಗ್ ಮತ್ತು ಸಾರಿಗೆ ಇತ್ಯಾದಿಗಳ ವ್ಯವಸ್ಥೆಯನ್ನು ಕಲ್ಪಿಸುವುದು.
  • ವರ್ಣಚಿತ್ರಗಳು, ಶಿಲ್ಪಗಳು, ಕೆತ್ತನೆಗಳು, ಇತ್ಯಾದಿಗಳ ಪ್ರರ್ದಶನಕ್ಕಾಗಿ ಆರ್ಟ್ ಗ್ಯಾಲರಿಗಳನ್ನು ಸ್ಥಾಪಿಸುವುದು.
  •  ಹೋಟೆಲ್ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಿ, ನಿರ್ವಹಿಸುವ ಮೂಲಕ ಇತರೆ ಉದ್ಯಮಿಗಳಿಗೆ ಹಣಕಾಸು ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳುವುದು.
  • ಕರ್ನಾಟಕ ರಾಜ್ಯ ಪ್ರವಾಸೋದ್ಯಮವನ್ನು ಪ್ರಚಾರಪಡಿಸುವ ಸಲುವಾಗಿ ದಿನಪ್ರತ್ರಿಕೆಗಳು, ನಿಯತಕಾಲಿಕಗಳ ಲೇಖಕರು ಮತ್ತು ಪ್ರಕಾಶಕರೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರುತ್ತದೆ.
  • ಸಿನಿ ಚಲನಚಿತ್ರಗಳು ಮತ್ತು ಸಾಕ್ಷ್ಯಾಚಿತ್ರಗಳ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರುತ್ತದೆ.

ಗ್ರೀನ್ ಚಾರ್ಟರ್ (9 ಅಂಕಗಳ ಕಾರ್ಯಸೂಚಿ)

  • ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಈ ಕೆಳಗೆ ಸೂಚಿಸಿದಂತೆ ಹಸಿರು ಪಟ್ಟಿಯನ್ನು ಅಳವಡಿಸಿಕೊಂಡಿರುತ್ತದೆ ಹಾಗೂ ಈ ಹಸಿರು ಪಟ್ಟಿಯನ್ನು ಅನುಷ್ಠಾನಗೊಳಿಸಲು ನಾವು ಅಕ್ಷರಸಹ ಮತ್ತು ಉತ್ಸಾಹದಿಂದ ಪ್ರತಿಜ್ಞೆ ಮಾಡುತ್ತೇವೆ.
  • ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಈ ಕೆಳಗೆ ಸೂಚಿಸಿದಂತೆ ಹಸಿರು ಪಟ್ಟಿಯನ್ನು ಅಳವಡಿಸಿಕೊಂಡಿರುತ್ತದೆ ಹಾಗೂ ಈ ಹಸಿರು ಪಟ್ಟಿಯನ್ನು ಅನುಷ್ಠಾನಗೊಳಿಸಲು ನಾವು ಅಕ್ಷರಸಹ ಮತ್ತು ಉತ್ಸಾಹದಿಂದ ಪ್ರತಿಜ್ಞೆ ಮಾಡುತ್ತೇವೆ.
  • ಮಳೆ ನೀರಿನ ಮರುಬಳಕೆ ಮತ್ತು ಮಳೆ ನೀರಿನ ಕೊಯ್ಲು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಪುರಸಭೆ ಮತ್ತು ಅಂತರ್ಜಲ ಮೂಲಗಳ ಬಳಕೆಯನ್ನು ಗಣನೀಯವಾಗಿ ಕಡಿಮೆಗೊಳಿಸುವುದು. ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್.ಟಿ.ಪಿ) ಗಳನ್ನು ಸ್ಥಾಪಿಸುವ ಮೂಲಕ ಸಂಸ್ಕರಿಸಿದ ನೀರಿನ ಪುನರ್ಬಳಕೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
  •  ಸಾವಯವ ಮತ್ತು ಬಳಕೆಗೆ ಸುರಕ್ಷಿತವಾದ ಉತ್ಪನ್ನಗಳನ್ನು ಬಳಸಲು ಗರಿಷ್ಠ ಉತ್ತೇಜನ ನೀಡಲಾಗುವುದು.
  • ಇಂಧನ ದಕ್ಷತೆ ಹೊಂದಿರುವ ಸಾಧನಗಳ ಹಾಗೂ ಸಾಂಪ್ರದಾಯಿಕವಲ್ಲದ ಶಕ್ತಿಯ ಮೂಲಗಳನ್ನು ಬಳಸುವ ಮೂಲಕ ಪಳೆಯುಳಿಕೆ ಇಂಧನ ಮತ್ತು ಗ್ರಿಡ್ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವುದು.
  • ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಬಳಕೆಯನ್ನು ಪ್ರೋತ್ಸಾಹಿಸದಿರುವುದು.
  • ಸ್ಥಳೀಯವಾಗಿ ವಸ್ತುಗಳ ಖರೀದಿಯನ್ನು ಉತ್ತೇಜಿಸುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಮತ್ತು ವ್ಯಾಪಾರಾವಕಾಶಗಳನ್ನು ಕಲ್ಪಿಸುವುದು.
  • ವಿಶೇಷವಾಗಿ ಸ್ಥಳೀಯ ಸಮುದಾಯದ ಯುವಕರು ಮತ್ತು ಮಹಿಳೆಯವರಿಗೆ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸಲಾಗುವುದು.
  • ಸ್ಥಳೀಯ ಕಲೆಗಳು, ಕರಕುಶಲ ವಸ್ತುಗಳು ಹಾಗೂ ಪಾಕಪದ್ಧತಿಗಳನ್ನು ಉತ್ತೇಜಿಸುವುದು.
  • ನಿಗಮದ ಘಟಕಗಳಲ್ಲಿ ಕೈಗೊಳ್ಳಲಾಗುವ ಚಟುವಟಿಕೆಗಳಲ್ಲಿ ಮರಗಳನ್ನು ನೆಡುವುದರ ಮೂಲಕ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸುವುದು.

ನಾನು ಓದಿ, ಅನುಷ್ಠಾನ ಮಾಡಿ ಮತ್ತು ಇತರರನ್ನು ಪ್ರೋತ್ಸಾಹಿಸುತ್ತೇನೆ.

Copyright © 2024 All Rights Reserved. KSTDC