Play Store
Facebook
Twitter
Instagram
YouTume
info@kstdc.co | 080-4334 4334

Page Banner

Premium Hotels

  • ಹೋಟೆಲ್ ಮಯೂರ ಪೈನ್ ಟಾಪ್, ನಂದಿ ಬೆಟ್ಟ
  • ಹೋಟೆಲ್ ಮಯೂರ ಸುದರ್ಶನ , ಊಟಿ
  • ಹೋಟೆಲ್ ಮಯೂರ ಹೊಯ್ಸಳ, ಮೈಸೂರು
  • ಹೋಟೆಲ್ ಮಯೂರ ಭುವೇಶ್ವರಿ, ಹಂಪಿ
  • ಹೋಟೆಲ್ ಮಯೂರ ವ್ಯಾಲಿ ವ್ಯೂ ಮಡಿಕೇರಿ
  • ಹೋಟೆಲ್ ಮಯೂರ ರಿವರ್ ವ್ಯೂ, ಶ್ರೀರಂಗಪಟ್ಟಣ
  • ಕುಮಾರಕೃಪ ಹೋಟೆಲ್
Hotel Mayura Pine Top Nandi Hills

ಹೋಟೆಲ್ ಮಯೂರ ಪೈನ್ ಟಾಪ್, ನಂದಿ ಬೆಟ್ಟ

ನಂದಿಬೆಟ್ಟ, ಚಿಕ್ಕಬಳ್ಳಾಪುರ
ಶ್ರೀ ಮಂಜೇಗೌಡ - 8618799919, 8618799918
8618799918 , 8618799919
nandihills@karnatakaholidays.net

ಆಶ್ಚರ್ಯಕರ ನೋಟಗಳು, ಮನಸ್ಸಿಗೆ ಮುದ ನೀಡುವ ಹಾಗೂ ವಾಸ್ತವಿಕವಾದ ಅನುಭವಗಳಿಂದ ಆವೃತವಾಗಿರುವ ನಂದಿ ಬೆಟ್ಟ ಸ್ಥಳವು ಸ್ವರ್ಗದಂತೆ ಭಾಸವಾಗುತ್ತದೆ ಮತ್ತು ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಅತ್ಯುತ್ತಮ ಸ್ಥಳವಾಗಿದೆ.
ನಂದಿ ಬೆಟ್ಟವು ನಗರದ ಸ್ವಂತ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ. ದೂರದಲ್ಲಿರುತ್ತದೆ.
ಸಮುದ್ರ ಮಟ್ಟದಿಂದ 1455 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ಪ್ರಶಾಂತ ವಾತಾವರಣ ಮತ್ತು ತಾಜಾ ಗಾಳಿಯನ್ನು ನೀಡುವ ತಾಣವಾಗಿದ್ದು, ಬೇಸಿಗೆ ತಾಪ ಕಳೆಯಲು ಟಿಪ್ಪು ಸುಲ್ತಾನ ಮತ್ತು ಬ್ರಿಟಿಷರು ಈ ಸ್ಥಳವನ್ನು ಬಳಸುತ್ತಿದ್ದರು.
ನಂದಿ ಬೆಟ್ಟವು ಒಂದು ಪರಿಪೂರ್ಣ ಹಾಗೂ ಧೀರ್ಘ ಮನೋಲ್ಲಾಸ ತಾಣವಾಗಿದ್ದು, ಸಾಹಸಪ್ರಿಯರಿಗೆ ಉತ್ತಮ ಸ್ಥಳವಾಗಿದೆ. ಸದರಿ ಸ್ಥಳ ಎರಡು ಪ್ರಾಚೀನ ಶಿವನ ದೇವಾಲಯಗಳನ್ನು ಹೊಂದಿದ್ದು, ಒಂದು ದೇವಾಲಯವು ಬೆಟ್ಟದ ಪಾದದಲ್ಲಿ ಮತ್ತು ಇನ್ನೊಂದು ದೇವಾಲಯವು ಶಿಖರದಲ್ಲಿದ್ದು, ಬೆಟ್ಟಕ್ಕೆ ಆಕರ್ಷಕವಾಗಿದೆ.

ಹೋಟೆಲ್ ಮಯೂರ ನಂದಿಬೆಟ್ಟವು, ಬೆಟ್ಟದ ಶಿಖರದಲ್ಲಿ 17 ಕೊಠಡಿಗಳ ವಸತಿ ಗೃಹ, ಡಿಲೆಕ್ಸ್ ರೂಮ್ (ಗಾಂಧೀ ನಿಲಯ), ಡಬಲ್ ರೂಮ್ (ಗಾಂಧಿ ನಿಲಯ ನ್ಯೂ ಬ್ಲಾಕ್) ಹೊಂದಿದೆ. ಅಲ್ಲದೇ, ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ರೆಸ್ಟೋರೆಂಟ್ ವ್ಯವಸ್ಥೆಯನ್ನು ಹೊಂದಿರುತ್ತದೆ.

ಸೂಚನೆ: ಸಂಜೆ 6.00 ಗಂಟೆಯೊಳಗೆ ಚೆಕ್ ಇನ್ ಆಗಬೇಕಾಗಿರುತ್ತದೆ.

Hotel Mayura Sudarshan Ooty

ಹೋಟೆಲ್ ಮಯೂರ ಸುದರ್ಶನ , ಊಟಿ

ಫರ್ನ್ ಹಿಲ್, ಊಟಿ-643004, ತಮಿಳುನಾಡು
ಶ್ರೀ ಕಾರ್ತಿಕ್ ಸಂತೋಷ್ 8970650052
0423-2443828
ooty@karnatakaholidays.net

ಊಟಿ ಪ್ರದೇಶದ ಸೌಂದರ್ಯವು ಒಂದು ಸಮ್ಮೋಹನ ಅನುಭವವಾಗಿರುತ್ತದೆ. ಮಾನ್ಸೂನ್ ಸಮಯದಲ್ಲಿ ಒಂದು ಮಾಯಾಲೋಕದಂತೆ ರೂಪುಗೊಳ್ಳುವ ಗಿರಿದಾಮವು ಹೆಚ್ಚಿನ ಸಮಯ ಇರುವಂತೆ ಪ್ರೇರೆಪಿಸುತ್ತದೆ.
ಮೈಸೂರಿನಿಂದ ಕೇವಲ 03 ಗಂಟೆಗಳ ಪ್ರಯಾಣವಿರುವ ಊಟಿ ಪ್ರದೇಶವು ತಮಿಳುನಾಡಿನಲ್ಲಿದ್ದು, ರಜಾ ದಿನಗಳನ್ನು ಕಳೆಯುವವರಿಗೆ, ಅಲೆದಾಡಲು ಬಯಸುವವರಿಗೆ ಹಾಗೂ ನಗರ ಜೀವನದಿಂದ ಬೇಸತ್ತು ವಿಶ್ರಾಂತಿ ಪಡೆಯಬಯಸುವವರಿಗೆ ಊಟಿ ಜನಪ್ರಿಯ ಸ್ಥಳವಾಗಿರುತ್ತದೆ. ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಊಟಿ ಪ್ರದೇಶವು ಸುಂದರವಾದ ಸರೋವರ, ಜಲಪಾತ, ವಿಶಾಲವಾದ ಸಸ್ಯ ಉದ್ಯಾನವನ, ಅಚ್ಚಹಸಿರಿನ ಅರಣ್ಯ ಹಾಗೂ ಕಣಿವೆಗಳನ್ನು ಒಳಗೊಂಡಿದೆ.
ಹೋಟೆಲ್ ಮಯೂರ ಸುದರ್ಶನ ಊಟಿ ಘಟಕವು ಸುಂದರವಾದ ಹಸಿರು ಪರಿಸರ ಹೊಂದಿದ ಫರ್ನ್ ಬೆಟ್ಟದಲ್ಲಿದ್ದು, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುತ್ತದೆ. ಹೋಟೆಲ್‍ನಲ್ಲಿ ಒಟ್ಟು 03 ಮರದ ಕುಟೀರಗಳು, 02 ಹವಾನಿಯಂತ್ರಿತವಲ್ಲದ ಕೊಠಡಿಗಳು ಹಾಗೂ 20 ಹವಾನಿಯಂತ್ರಿತವಲ್ಲದ ಡಿಲೆಕ್ಸ್ ಬೆಡ್ ರೂಮ್‍ಗಳ ಇರುತ್ತವೆ.
ಅಲ್ಲದೇ, ಉತ್ತಮ ರೆಸ್ಟೋರೆಂಟ್ ಸೌಲಭ್ಯವಿದ್ದು, ಊಟಿ ಶೈಲಿಯ ಪಾಕಪದ್ಧತಿ ಹೊಂದಿರುತ್ತದೆ.
ಮುಂದಿನ ಬಾರಿ ಪ್ರವಾಸ ಕೈಗೊಳ್ಳುವ ಮನಸ್ಸಾದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

 

Hotel Mayura Hoysala Mysuru

ಹೋಟೆಲ್ ಮಯೂರ ಹೊಯ್ಸಳ, ಮೈಸೂರು

#2, ಝಾನ್ಸಿ ಲಕ್ಷ್ಮಿಬಾಯಿ ರಸ್ತೆ, ಮೈಸೂರು – 570 005
ಶ್ರೀ ಮಂಜುನಾಥ್ ಎಚ್ ಕೆ 8970650014
0821-2426160
hoysala@karnatakaholidays.net

 

ಈ ಸ್ಥಳದಲ್ಲಿ ಸಮಯವು ಇಲ್ಲೇ ನಿಲ್ಲಬೇಕೆಂದು ಭಾಸವಾಗುದಲ್ಲದೇ ನಾವು ಈ ಸ್ಥಳಕ್ಕೆ ಸಂಬಂಧಪಟ್ಟವರು ಎಂಬ ಭಾವನೆ ಬರುವುದು. ಅರಮನೆ ನಗರವಾದ ಮೆಜೆಸ್ಟಿಕ್ ಮೈಸೂರು ನಿರೀಕ್ಷೆಗಿಂತ ಹೆಚ್ಚಿನ ಆಕರ್ಷಣೆ ಹೊಂದಿದೆ.
ಭಾರತದ ಇತಿಹಾಸದಲ್ಲೇ ಅತೀ ಹೆಚ್ಚು ಕಾಳ ಆಳ್ವಿಕೆ ನಡೆಸಿದ ರಾಜವಂಶಗಳಲ್ಲಿ ಒಂದಾದ ‘ಒಡೆಯರು’ ಅರಮನೆಗಳ ನಗರ ಎಂದು ಖ್ಯಾತಿ ಪಡೆದ ಈ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು.
ಇದಲ್ಲದೇ, ಅಂಬಾ ವಿಲಾಸ್ ಅಥವಾ ಮೈಸೂರು ಅರಮನೆ ವಸ್ತು ಸಂಗ್ರಹಾಲಯ, ಹೋಟೆಲ್ ಇನ್ನಿತರೆ ಅನೇಕ ವಿಷಯಗಳಿಗೆ ಜನಪ್ರಿಯವಾಗಿರುತ್ತದೆ.
ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ನಡೆಯುವ ದಸರಾ ಮೆರವಣಿಗೆಯು ಭವ್ಯತೆಗೆ ಹೆಸರುವಾಸಿಯಾಗಿದೆ. ನಗರವು ವಿಶಾಲವಾದ ಮೃಗಾಲಯ ಹೊಂದಿದ್ದು, ಸದರಿ ಮೃಗಾಲಯವನ್ನು ರಾಯಕ್ ಪ್ರೋತ್ಸಾಹದಡಿಯಲ್ಲಿ ಪ್ರಾರಂಭಿಸಲಾಗಿದೆ ಮತ್ತು ಗೋಥಿಕ್ ಶೈಲಿಯಲ್ಲಿ ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್ ನಿರ್ಮಿಸಲಾಗಿದೆ.

ಹೋಟೆಲ್ ಮಯೂರ ಹೊಯ್ಸಳವು ಮೈಸೂರಿನ ಮಧ್ಯಬಾಗದಲ್ಲಿದ್ದು, ರೈಲು ನಿಲ್ದಾಣದ ಹತ್ತಿರದಲ್ಲಿರುವುದರಿಂದ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಅಲ್ಲದೆ ಸದರಿ ಹೋಟೆಲ್ ಪಾರಂಪಾರಿಕವಾದ ಕಟ್ಟಡದಲ್ಲಿ 13 ಹವಾನಿಯಂತ್ರಿತ ಡಬಲ್ ಬೆಡ್‍ರೂಮ್ ಮತ್ತು 18 ಉತ್ತಮ ಡಬಲ್ ಬೆಡ್‍ರೂಮ್‍ಗಳ ಸುಂದರವಾದ ವಸತಿ ಸೌಕರ್ಯ ಹೊಂದಿದೆ.

 

Hotel Mayura Bhuvaneshwari Hampi

ಹೋಟೆಲ್ ಮಯೂರ ಭುವೇಶ್ವರಿ, ಹಂಪಿ

ಕಮಲಾಪುರ, ಹಂಪಿ, ಬಳ್ಳಾರಿ-583 221
ಶ್ರೀ ಅಭಯ್ ಕುಮಾರ್ ಝಾ 8970650025
0839-4241574
hampi@karnatakaholidays.net

ಮತ್ತೆ ಮತ್ತೆ ನೋಡಬೇಕೆನಿಸುವ ಒಂದು ಸುಂದರ ತಾಣವೆಂದರೆ ಹಂಪಿ. ಆಕರ್ಷಿಸುವ ಸೂರ್ಯಾಸ್ತ, ದಿಗಂತಗಳು, ವಾಸ್ತವಿಕವೆನಿಸುವ ಭೂದೃಶ್ಯಗಳು, ವಿಶಾಲ ಆಕಾಶ ಮತ್ತು ಭವ್ಯವಾದ ದೇವಾಲಯಗಳಿಗೆ ಹಂಪಿ ಹೆಸರುವಾಸಿಯಾಗಿದ್ದು, ಮನಃಶಾಂತಿಯನ್ನು ನೀಡುತ್ತದೆ. ಹಂಪಿಯ ವಿಶೇಷತೆಯನ್ನು ಪದಗಳಲ್ಲಿ ವರ್ಣಿಸಲು ಸಾದ್ಯವಿಲ್ಲ. ರಾಯಲ್ ಸೆಂಟರ್ ಮತ್ತು ಸೇಕ್ರೆಡ್ ಸೆಂಟರ್ ಎಂಬ ಎರಡು ಪ್ರದೇಶಗಳಲ್ಲಿರುವ ಪುರಾತನ ಅವಶೇಷಗಳನ್ನು ನೋಡಿದ್ದಲ್ಲಿ ಮನಸ್ಸಿಗೆ ಹಿಂದೆಂದೂ ಇಲ್ಲದ ಸಂತೋಷವಾಗುವುದು.

ಹಂಪಿಯಲ್ಲಿರುವ ಹೋಟೆಲ್ ಮಯೂರ ಭುವನೇಶ್ವರಿ, ಕಮಲಾಪುರ ಇದು ವಿಶ್ವ ಪರಂಪರೆಯ ತಾಣ ವ್ಯಾಪ್ತಿಯಲ್ಲಿರುವ ಏಕೈಕ ಹೋಟೆಲ್ ಆಗಿದೆ. ಇದು 30 ರೂಮ್‍ಗಳನ್ನೊಳಗೊಂಡ ನವೀಕರಿಸಲಾಗಿರುವ ಹೋಟೆಲ್ ಆಗಿದ್ದು, ಹವಾ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ ಮತ್ತು 06 ವಸತಿ ನಿಲಯಗಳನ್ನು ಸಹ ಹೊಂದಿರುತ್ತದೆ.
ಬರುವ ಅತಿಥಿಗಳಿಗೆ ಕಾಂಟಿನೆಂಟಲ್ ಮತ್ತು ಭಾರತೀಯ ಪಾಕ ಪದ್ಧತಿಯೊಂದಿಗೆ ಹಂಪಿಯ ಸವಿರುಚಿಯನ್ನು ಆನಂದಿಸಬಹುದು ಮತ್ತು ಉತ್ತಮ ರೆಸ್ಟೋರೆಂಟ್ ವ್ಯವಸ್ಥೆಯನ್ನು ಪಡೆಯಬಹುದು.
ಸದರಿ ಹೋಟೆಲ್‍ನಲ್ಲಿ ಪ್ರವಾಸಿ ಮಾರ್ಗದರ್ಶಿಗಳೊಂದಿಗೆ ಪ್ರವಾಸಗಳನ್ನು ಕೈಗೊಳ್ಳುವ ವ್ಯವಸ್ಥೆ ಇರುತ್ತದೆ.

Hotel Mayura Valley View Madikeri

ಹೋಟೆಲ್ ಮಯೂರ ವ್ಯಾಲಿ ವ್ಯೂ ಮಡಿಕೇರಿ

ರಾಜ ಶೀಟ್ ಹತ್ತಿರ, ಮಡಿಕೇರಿ-571 201
ಶ್ರೀ ಜಿ.ಆರ್. ಕಿರಣ್ ಕುಮಾರ್ +918970650028
08272-228387
valleyview@karnatakaholidays.net

ಮಾಲಿನ್ಯ ಹಾಗೂ ಅವ್ಯವಸ್ಥೆಯಿಂದ ದೂರು ಉಳಿದಿರುವ ಪ್ರದೇಶವೆಂದರೆ ಮಡಿಕೇರಿ. ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಸ್ವರ್ಗದಂತೆ ಭಾಸವಾಗುವುದಲ್ಲದೇ ಪ್ರಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ.

ಯಾವುದೇ ಕಾಲಮಾನದಲ್ಲಿ ಭೇಟಿ ನೀಡಿದರೂ ಉತ್ತಮ ಅನುಭವ ನೀಡುತ್ತದೆ. ದಟ್ಟವಾದ ಅರಣ್ಯದ ಲವ್ಲಿ ಗಿರಿದಾಮದಲ್ಲಿ ಮಡಿಕೇರಿ ನೆಲೆಸಿದ್ದು, ಉತ್ತಮ ಕಾಫೀ ತೋಟ ಮತ್ತು ಆಶ್ವರ್ಯಕರ ಜಲಪಾತವನ್ನೊಳಗೊಂಡ ಮಡಿಕೇರಿಯು ತನ್ನ ಸಾಂಪ್ರದಾಯಕ ರುಚಿಯ ಪಾಕಪದ್ದತಿಯನ್ನು ಹೊಂದಿದೆ. ಕೊಡಗು ಜಿಲ್ಲೆಯ ಆಕರ್ಷಕ ರಾಜಧಾನಿಯಾದಂತಹ ಮಡಿಕೇರಿಯು ಪ್ರಾಚೀನ ಕಾಲದ ಆಕರ್ಷಕ ನೋಟವನ್ನು ಹೊಂದಿದೆ ಹಾಗೂ ರೆಡ್ ರೂಫಡ್ ಗುಂಪು ಸಮುದಾಯ ಮತ್ತು ಉತ್ತಮ ಮಾರುಕಟ್ಟೆಯನ್ನು ಸಹ ಹೊಂದಿದೆ.
ಮಡಿಕೇರಿಯು ಸಾಕಷ್ಟು ಪಿಕ್ನಿಕ್ ಸ್ಥಳಗಳನ್ನು ಒದಗಿಸುದಲ್ಲದೇ, ಕೆಲವೊಂದು ಆಸಕ್ತÀ ಚಟುವಟಿಕೆಗಳಾದ ಟ್ರಕ್ಕಿಂಗ್, ಬೆಟ್ಟ ಹತ್ತುವುದು ಹಾಗೂ ನದಿಯಲ್ಲಿನ ದೋಣಿ ವಿಹಾರ ಇತ್ಯಾದಿಗಳನ್ನು ಸಹ ಒದಗಿಸುತ್ತದೆ.
ಮಡಿಕೇರಿ ಬೆಟ್ಟದ ಅಂಚಿನಲ್ಲಿರುವ ಹೋಟೆಲ್ ಮಯೂರ ವ್ಯಾಲಿ ವ್ಯೂ ಮಡಿಕೇರಿ ಘಟಕವು ಸದರಿ ಸ್ಥಳದ ಆಕರ್ಷಕ ನೋಟವನ್ನು ಸವಿಯಲು ಉತ್ತಮ ಸ್ಥಳವಾಗಿದೆ.
ವ್ಯಾಲಿ ವ್ಯೂ ಮಡಿಕೇರಿ ಹೋಟೆಲ್ ಒಟ್ಟು 36 ಹವಾ ನಿಯಂತ್ರಿತ ಕೊಠಡಿಗಳು ಮತ್ತು ಉತ್ತಮ ದರ್ಜೆಯ ಡಬಲ್ ಬೆಡ್ ಕೊಠಡಿಗಳನ್ನು ಹೊಂದಿದೆ. ಬಾರ್ ವ್ಯವಸ್ಥೆಯನ್ನೊಳಗೊಂಡ ರೆಸ್ಟೋರೆಂಟ್ ಹೊಂದಿದ್ದು, ಕೊಡಗು ಶೈಲಿಯ ಪಾಕಪದ್ಧತಿಯನ್ನು ಅಳವಡಿಸಲಾಗಿರುತ್ತದೆ. ಅಲ್ಲದೇ, ಘಟಕಕ್ಕೆ ಬರುವ ಪ್ರವಾಸಿಗರಿಗೆ ಮಡಿಕೇರಿ ಸುತ್ತಮುತ್ತಲಿನ ಸ್ಥಳ ವೀಕ್ಷಣೆಯ ಸೌಲಭ್ಯವನ್ನು ಹೊಂದಿದ್ದು, ಉತ್ತಮ ಸವಿನೆನಪುಗಳನ್ನು ಕಲೆಹಾಕಬಹುದು.

ಹೋಟೆಲ್ ಮಯೂರ ರಿವರ್ ವ್ಯೂ, ಶ್ರೀರಂಗಪಟ್ಟಣ

ಮೈಸೂರು ರಸ್ತೆ, ಶ್ರೀರಂಗಪಟ್ಟಣ, ಮಂಡ್ಯ-571438
ಶ್ರೀ ಶ್ರೇಯಸ್ 8970650004
0823-6297114
riverview@karnatakaholidays.net

ಶ್ರೀರಂಗಪಟ್ಟಣವು ಗಮನಾರ್ಹ ಇತಿಹಾಸ ಹಾಗೂ ವಾಸ್ತುಶಿಲ್ಪದ ದ್ವೀಪ ಪಟ್ಟಣವಾಗಿದ್ದು, ಶ್ರೀರಂಗಪಟ್ಟಣವು ಪ್ರಾಚೀನ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ಗುಂಬಜ್ ಮಾದರಿಯಲ್ಲಿನ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಸಮಾಧಿಗೆ ಹೆಸರುವಾಸಿಯಾಗಿದೆ. ನೀವು ಈ ಸ್ಥಳಕ್ಕೆ ಭೇಟಿ ನೀಡಿದಾಗ ಅರಮನೆಗಳು, ಕೋಟೆಗಳು, ಕತ್ತಲಕೋಣೆಗಳುಮ ಮಸೀದಿಗಳಿಗಿಂತ ಹೆಚ್ಚಿನ ಪ್ರೇಕ್ಷಣೀಯ ಸ್ಥಳಗಳು ತೆರೆದುಕೊಳ್ಳುತ್ತವೆ.

ಹೋಟೆಲ್ ಮಯೂರ ರಿವರ್ ವ್ಯೂ ಕಾವೇರಿ ನದಿ ದಂಡೆಯಲ್ಲಿದ್ದು, ಇಲ್ಲಿನ ವಾಸ್ತವ್ಯ ನಿಮಗೆ ಸುಂದರವಾದ ಅನುಭವವನ್ನು ನೀಡುತ್ತದೆ. ಈ ಹೋಟೆಲ್‍ನಲ್ಲಿ 26 ಸುಂದರವಾದ ಕೊಠಡಿಗಳಿದ್ದು, 06 ಕೊಠಡಿಗಳು ನದಿಯ ಕಡೆಗೆ ಮುಖ ಮಾಡಿಕೊಂಡಿದ್ದು, ರೆಸ್ಟೋರೆಂಟ್ ಮತ್ತು ಬಾರ್‍ನ ಪಕ್ಕದಲ್ಲಿಯೇ ಇರುವುದರಿಂದ ನಿಮಗೆ ಸ್ಮರಣೀಯ ಅನುಭವವನ್ನು ನೀಡುತ್ತದೆ. ಇಲ್ಲಿಗೆ ಆಗಮಿಸುವ ಅತಿಥಿಗಳಿಗೆ ಬೋಟಿಂಗ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗುವುದು.

m

ಕುಮಾರಕೃಪ ಹೋಟೆಲ್

ಹೊಸ ಕುಮಾರಕೃಪ ಅತಿಥಿ ಗೃಹ ಕುಮಾರಕೃಪ ರಸ್ತೆ, ಬೆಂಗಳೂರು -560001.
ಶ್ರೀ ದೇವರಾಜ್ 9606987811
080-22259404/05/06/07
infokkgh@kstdc.co

ಹೊಸ ಕುಮಾರಕೃಪಾ ಅತಿಥಿಗೃಹವು ಬೆಂಗಳೂರು ನಗರದ ಮಧ್ಯದಲ್ಲಿದ್ದು, ಇದು 18 ರಂಧ್ರಗಳ ಗಾಲ್ಫ್ ಕೋರ್ಸ್‍ನ ಪಕ್ಕದಲ್ಲಿದೆ. ಹೊಸ ಕುಮಾರಕೃಪಾ ಅತಿಥಿಗೃಹವು ಇಸಿಬಿಎ ಸೇರಿದಂತೆ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುತ್ತದೆ. ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು ಕಟ್ಟಡ ಕ್ಷೇತ್ರದಲ್ಲಿ ಇಂಧನ ದಕ್ಷತೆಯನ್ನು ಉತ್ತೇಜಿಸಲು ಮೊದಲ ಹೆಜ್ಜೆಯಾಗಿ ಶಕ್ತಿ ಸಂರಕ್ಷಣಾ ಕಟ್ಟಡ ಕೋಡ್ (ಇಸಿಬಿಸಿ) ಅನ್ನು 2007ರ ಮೇ ತಿಂಗಳಿನಲ್ಲಿ ಪ್ರಾರಂಭಿಸಲಾಯಿತು ಮತ್ತು ಕುಮಾರಕೃಪಾ ಅತಿಥಿಗೃಹ ಹೊಸ ಕಟ್ಟಡವು ಕರ್ನಾಟಕದಲ್ಲಿ ಈ ವೈಶಿಷ್ಟ್ಯವನ್ನು ಮೊದಲನೆಯದಾಗಿ ಅಳವಡಿಸಿಕೊಂಡಿದೆ. ಸಂಪೂರ್ಣ ಅತಿಥಿಗೃಹದಲ್ಲಿ ಸಂವೇದಕ ಎಲ್.ಇ.ಡಿ ಲೈಟ್ಸ್ ಗಳನ್ನು ಹಾಗೂ ಉಷ್ಣಾಂಶ ಮತ್ತು ಶೀತಲತೆಯು ತಾಪಮಾನವನ್ನು ಸರಿದೂಗಿಸಲು ವೆರಿಯೇಬಲ್ ರೆಫ್ರಿಜರೇಟರ್ ಪ್ಲೋ ವನ್ನು ಅಳವಡಿಸಲಾಗಿರುತ್ತದೆ.
ಅತಿಥಿಗೃಹವು ಡಿಲಾಕ್ಸ್ ರೂಮ್‍ಗಳನ್ನು ಹೊಂದಿದ್ದು, ವಿಶಾಲವಾದ ಮಲಗುವ ಕೋಣೆ ಮತ್ತು ಸ್ನಾನಗೃಹವನ್ನು ಹೊಂದಿದ್ದು, ಎಲ್.ಇ.ಡಿ ಟಿ.ವಿ, ಕೇಂದ್ರೀಕೃತ ಎ.ಸಿಯೊಂದಿಗೆ ಬಿಸಿ ನೀರಿನ ವ್ಯವಸ್ಥೆಗೆ ಸೋಲಾರ್ ಹಾಗೂ ಹೀಟ್ ಪಂಪ್‍ನ್ನು ಅಳವಡಿಸಲಾಗಿರುತ್ತದೆ. 24 ಗಂಟೆಗಳ ಸ್ವಾಗತ ಕೌಂಟರ್, ರೆಸ್ಟೋರೆಂಟ್, ಕೊಠಡಿ ಸೇವೆಯೊಂದಿಗೆ ಜಿಮ್, ಗ್ರಂಥಾಲಯ, ವ್ಯಾಪಾರ ಕೇಂದ್ರ, ಪತ್ರಿಕೆಗಳು, ಟಿ.ವಿ ಚಾನೆಲ್‍ಗಳು, ವೇಕಪ್ ಕರೆ, ವಾಹನಗಳ ಪಾರ್ಕಿಂಗ್, ಹೌಸ್‍ಕೀಪಿಂಗ್ ಸೇವೆ, ಲಾಂಡ್ರಿ ಸೇವೆ, ವೈದ್ಯಕೀಯ ವ್ಯವಸ್ಥೆ, ವೀಲ್ ಚೇರ್, ವೈಟಿಂಗ್ ಲಾಂಗ್, ಗಾರ್ಡನ್ ಗಳ ಸೌಲಭ್ಯವನ್ನು ಹೊಂದಿರುತ್ತದೆ.

ಸಂದರ್ಶಕರ ಕೌಂಟರ್
0406425
Copyright © 2020 All Rights Reserved. KSTDC