ಮತ್ತೆ ಮತ್ತೆ ನೋಡಬೇಕೆನಿಸುವ ಒಂದು ಸುಂದರ ತಾಣವೆಂದರೆ ಹಂಪಿ. ಆಕರ್ಷಿಸುವ ಸೂರ್ಯಾಸ್ತ, ದಿಗಂತಗಳು, ವಾಸ್ತವಿಕವೆನಿಸುವ ಭೂದೃಶ್ಯಗಳು, ವಿಶಾಲ ಆಕಾಶ ಮತ್ತು ಭವ್ಯವಾದ ದೇವಾಲಯಗಳಿಗೆ ಹಂಪಿ ಹೆಸರುವಾಸಿಯಾಗಿದ್ದು, ಮನಃಶಾಂತಿಯನ್ನು ನೀಡುತ್ತದೆ. ಹಂಪಿಯ ವಿಶೇಷತೆಯನ್ನು ಪದಗಳಲ್ಲಿ ವರ್ಣಿಸಲು ಸಾದ್ಯವಿಲ್ಲ. ರಾಯಲ್ ಸೆಂಟರ್ ಮತ್ತು ಸೇಕ್ರೆಡ್ ಸೆಂಟರ್ ಎಂಬ ಎರಡು ಪ್ರದೇಶಗಳಲ್ಲಿರುವ ಪುರಾತನ ಅವಶೇಷಗಳನ್ನು ನೋಡಿದ್ದಲ್ಲಿ ಮನಸ್ಸಿಗೆ ಹಿಂದೆಂದೂ ಇಲ್ಲದ ಸಂತೋಷವಾಗುವುದು.
ಹಂಪಿಯಲ್ಲಿರುವ ಹೋಟೆಲ್ ಮಯೂರ ಭುವನೇಶ್ವರಿ, ಕಮಲಾಪುರ ಇದು ವಿಶ್ವ ಪರಂಪರೆಯ ತಾಣ ವ್ಯಾಪ್ತಿಯಲ್ಲಿರುವ ಏಕೈಕ ಹೋಟೆಲ್ ಆಗಿದೆ. ಇದು 30 ರೂಮ್‍ಗಳನ್ನೊಳಗೊಂಡ ನವೀಕರಿಸಲಾಗಿರುವ ಹೋಟೆಲ್ ಆಗಿದ್ದು, ಹವಾ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ ಮತ್ತು 06 ವಸತಿ ನಿಲಯಗಳನ್ನು ಸಹ ಹೊಂದಿರುತ್ತದೆ.
ಬರುವ ಅತಿಥಿಗಳಿಗೆ ಕಾಂಟಿನೆಂಟಲ್ ಮತ್ತು ಭಾರತೀಯ ಪಾಕ ಪದ್ಧತಿಯೊಂದಿಗೆ ಹಂಪಿಯ ಸವಿರುಚಿಯನ್ನು ಆನಂದಿಸಬಹುದು ಮತ್ತು ಉತ್ತಮ ರೆಸ್ಟೋರೆಂಟ್ ವ್ಯವಸ್ಥೆಯನ್ನು ಪಡೆಯಬಹುದು.
ಸದರಿ ಹೋಟೆಲ್‍ನಲ್ಲಿ ಪ್ರವಾಸಿ ಮಾರ್ಗದರ್ಶಿಗಳೊಂದಿಗೆ ಪ್ರವಾಸಗಳನ್ನು ಕೈಗೊಳ್ಳುವ ವ್ಯವಸ್ಥೆ ಇರುತ್ತದೆ.
ಸೂಚನೆ:
ಹೋಟೆಲ್ ಬುಕ್ಕಿಂಗ್‍ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
ದಯವಿಟ್ಟು ಗಮನಿಸಿ: ಬುಕ್ಕಿಂಗ್‍ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್‍ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.