info@kstdc.co | 080-4334 4334
ಬಜೆಟ್ ಹೋಟೆಲ್‌ಗಳು
ಹೋಟೆಲ್ ಮಯೂರ ಚಾಲುಕ್ಯ ಬಾದಾಮಿ
ಅವಲೋಕನ
ಇಲ್ಲಿಗೆ ತಲುಪಲು
ಸ್ಥಳ
ದರ
ಸೌಲಭ್ಯಗಳು
ಮಾಡಬೇಕಾದ ಕೆಲಸಗಳು
ಗ್ಯಾಲರಿ
ಮುಂದೆ ನೀವು ಆಶ್ಚರ್ಯ ಪಡುವ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಇಚ್ಛಿಸುವೀರಾ ? ಹಾಗಾದರೆ ನೀವು ಉತ್ತರ ಕರ್ನಾಟಕದಲ್ಲಿ ಗುಹೆಗಳಿಂದ ಕೂಡಿರುವ ಬಾದಾಮಿ ಪ್ರದೇಶಕ್ಕೆ ಭೇಟಿ ನೀಡಬಹುದಾಗಿದೆ . ಈ ಪ್ರದೇಶವು ತುಕ್ಕು – ಕೆಂಪು ಬಂಡೆಯ ಮುಖದಿಂದ ಕೆತ್ತಿದ ಶಿಲಾ ದೇವಾಲಯಗಳ ನೆಲೆಯಾಗಿದೆ . ಈ ಸ್ಮಾರಕಗಳನ್ನು ರಚಿಸಲು ಶ್ರಮಿಸಿದ ಚಾಲುಕ್ಯ ಶಿಲ್ಪಿಗಳ ಅಸಾಧಾರಣ ಕಲಾತ್ಮಕತೆಯೇ ಈ ದೇವಾಲಯಗಳಿಗೆ ಸಾಕ್ಷಿಯಾಗಿದೆ . ಬಾದಾಮಿ ಭಾರತದ ವೈಭವಯುತವಾದ ಭೂತಕಾಲವಾಗಿದ್ದು , 18 ಶಸ್ತ್ರ ಸಜ್ಜಿತ ನಟರಾಜರ 81 ನೃತ್ಯ ಭಂಗಿಗಳನ್ನು , ವಿಷ್ಣುವಿಗೆ ಅರ್ಪಿತವಾದ ದೇವಾಲಯಗಳ ಸುಂದರ ಶಿಲ್ಪಗಳನ್ನು ಹೊಂದಿದೆ .
ಹೋಟೆಲ್ ಮಯೂರ ಚಾಲುಕ್ಯ ಬಾದಾಮಿ ಘಟಕವು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದ್ದು, ಎರಡು ಬ್ಲಾಕ್‍ಗಳನ್ನು ಒಳಗೊಂಡಿರುತ್ತದೆ. ಒಂದು ಬ್ಲಾಕ್‍ನಲ್ಲಿ 10 ಡಬಲ್ ಬೆಡ್ ರೂಮ್‍ಗಳಿದ್ದು, ಅವುಗಳಲ್ಲಿ 6 ಹವಾನಿಯಂತ್ರಿತ ಡಿಲಕ್ಸ್ ಕೊಠಡಿಗಳು ಮತ್ತು 10 ಹವಾನಿಯಂತ್ರಿತ ಸೆಮಿ ಡಿಲಕ್ಸ್ ಕೊಠಡಿಗಳು ಮತ್ತು ಇನ್ನೊಂದು ಬ್ಲಾಕ್‍ನಲ್ಲಿ 10 ಹವಾ ರಹಿತ ಕೊಠಡಿಗಳಿದ್ದು, ಅವುಗಳಲ್ಲಿ 04 ಡಬಲ್ ಬೆಡ್ ರೂಮ್‍ಗಳು ಮತ್ತು 02 ಮೂರು ಬೆಡ್‍ಗಳ ರೂಮ್‍ಗಳನ್ನು ಒಳಗೊಂಡಿರುತ್ತದೆ. ಹೋಟೆಲ್ ರೆಸ್ಟೋರೆಂಟ್ ಮತ್ತು ಬೀರ್ ಪಾರ್ಲರ್‍ಗಳ ವ್ಯವಸ್ಥೆಯನ್ನು ಸಹಾ ಹೊಂದಿರುತ್ತದೆ.
ಬಾದಾಮಿ-587201
ಶ್ರೀಮತಿ. ಜಯಲಕ್ಷ್ಮಿ 8970650024
08357-220046
badami@karnatakaholidays.net
By Air : ಬೆಂಗಳುರು-ಹುಬ್ಬಳ್ಳಿ-504 ಕಿ.ಮೀ, ಗೋವಾ-290 ಕಿ.ಮೀ
By Rail: ಹುಬ್ಬಳ್ಳಿ -110 ಕಿ.ಮೀ
By Road : ಹಂಪಿ-ಹೊಸಪೇಟೆ-160 ಕಿ.ಮೀ, ಹುಬ್ಬಳ್ಳಿ-110 ಕಿ.ಮೀ
ಹವಾ ನಿಯಂತ್ರಿತ ಡಬಲ್ ಡಿಲಾಕ್ಸ್ ರೂಮ್
Weekday Rs.2499/-
Weekend Rs.2749/-
ಹವಾ ನಿಯಂತ್ರಿತ ಸೆಮಿ ಡಿಲಾಕ್ಸ್ ಡಬಲ್ ರೂಮ್
Weekday Rs.1499/-
Weekend Rs.1649/-
ಹವಾ ರಹಿತ ಸೆಮಿ ಡಿಲಾಕ್ಸ್ ಡಬಲ್ ರೂಮ್
Weekday Rs.999/-
Weekend Rs.1099/-
Sightseeing activities:
Buthanatha Temple – 1.1km
Agastya Lake – 1.1km
Banashankari Temple – 4.5km
Badami Cave Temple – 2.9km
For more sightseeing places and details contact the hotel front desk
ಸೂಚನೆ
ಸೂಚನೆ :
ಇಲ್ಲಿ ಪ್ರದರ್ಶಿಸಲಾದ ದರಗಳು ಮೂಲ ದರಗಳಾಗಿರುತ್ತದೆ ( ತೆರಿಗೆ ಹೆಚ್ಚುವರಿ )
ಈ ಮೇಲಿನ ದರಗಳಲ್ಲಿ ಕಾಲ ಕಾಲಕ್ಕನುಗುಣವಾಗಿ ದರಗಳನ್ನು ಹೆಚ್ಚಿಸಲಾಗುವುದು .
ಷರತ್ತು ಮತ್ತು ನಿಬಂಧನೆಗಳು
ಹೋಟೆಲ್ ಬುಕ್ಕಿಂಗ್‍ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು :
ಚೆಕ್ ಇನ್ ಸಮಯ ಮಧ್ಯಾಹ್ನ 1.00 ಗಂಟೆ . ಸದರಿ ಸಮಯಕ್ಕಿಂತ ಮುಂಚೆ ಚೆಕ್ ಇನ್ ಮಾಡಲು ಬಯಸುವ ಮನವಿಯನ್ನು ಲಭ್ಯತೆಗನುಗುಣವಾಗಿ ಪರಿಗಣಿಸಲಾಗುವುದು .
ಚೆಕ್ ಔಟ್ ಸಮಯ ಬೆಳಿಗ್ಗೆ 11.00 ಗಂಟೆ .
ಬುಕ್ಕಿಂಗ್‍ಗಳಲ್ಲಿ ಒಮ್ಮೆ ಮಾತ್ರ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದ್ದು , ಕನಿಷ್ಠ ಚೆಕ್ ಇನ್ ದಿನಾಂಕದ 24.00 ಗಂಟೆಗಳ ಮೊದಲು ತಿದ್ದಪಡಿ ಮಾಡಲು ಅವಕಾಶವಿರುತ್ತದೆ .
ದಯವಿಟ್ಟು ಗಮನಿಸಿ : ಬುಕ್ಕಿಂಗ್‍ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ . ಅಲ್ಲದೇ , ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ , ಕೆ . ಎಸ್ . ಟಿ . ಡಿ . ಸಿ ಯ ಮಯೂರ ಹೋಟೆಲ್‍ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ .
ಸುಂಕವು ತೆರಿಗಳನ್ನು ಹೊರತುಪಡಿಸಿರುತ್ತದೆ .
ಪ್ರದರ್ಶಿತ ದರಗಳು ಮೂಲ ದರಗಳಾಗಿರುತ್ತವೆ ( ಜಿ . ಎಸ್ . ಟಿ . ಹೆಚ್ಚುವರಿಯಾಗಿರುತ್ತದೆ ).
ಕಾಲೋಚಿತ ಹೆಚ್ವಳವು ಮೂಲ ಸುಂಕದ ಮೇಲೆ ಇರುತ್ತದೆ .
ಚಕ್ ಇನ್ ದಿನದಂದು ಹೆಚ್ಚುವರಿಯಾಗಿ ಹಾಸಿಗೆ ಪಡೆದಲ್ಲಿ ಅಥವಾ ಹೆಚ್ಚುವರಿ ವ್ಯಕ್ತಿ ಇದ್ದಲ್ಲಿ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತದೆ .
ಷರತ್ತು ಮತ್ತು ನಿಯಮಗಳನ್ನೊಳಪಟ್ಟು , ಚೆಕ್ ಇನ್ ದಿನಾಂಕದಂದು ಹೋಟೆಲ್‍ನಲ್ಲಿಯೇ ಪಾವತಿಸುವ ಆಯ್ಕೆ ಸಹ ಲಭ್ಯವಿರುತ್ತದೆ .
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
07 ದಿನಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ , ಪೂರ್ಣ ಮೊತ್ತವನ್ನು ಮರುಪಾವತಿ ಮಾಡಲಾಗುವುದು .
07 ದಿನಗಳೊಳಗೆ ಅಥವಾ 48 ಗಂಟೆಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ 25% ಮೊತ್ತವನ್ನು ಕಡಿತಗೊಳಿಸಿ , ಪಾವತಿಸಲಾಗುವುದು .
ಚೆಕ್ ಇನ್ ದಿನಾಂಕದ 24 ಗಂಟೆಗಳೊಳಗೆ ಬುಕ್ಕಿಂಗ್ ರದ್ದುಪಡಿಸಿದ್ದಲ್ಲಿ ಯಾವುದೇ ಮರುಪಾವತಿ ಮಾಡಲಾಗುವುದಿಲ್ಲ .
ಕಾಲೋಚಿತವಲ್ಲದ ಸಂದರ್ಭ ಅಂದರೆ , ಜನವರಿ , ಫೆಬ್ರವರಿ , ಮಾರ್ಚ್ , ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ .
24 ಗಂಟೆಗಳ ಮುಂಚಿತವಾಗಿ ರದ್ದುಪಡಿಸಿದಲ್ಲಿ , ಯಾವುದೇ ರದ್ದತಿ ಶುಲ್ಕಗಳಿರುವುದಿಲ್ಲ
24 ಗಂಟೆಗಳೊಳಗಾಗಿ ರದ್ದುಪಡಿಸಿದಲ್ಲಿ , ಯಾವುದೇ ಮರುಪಾವತಿ ಇರುವುದಿಲ್ಲ .
Copyright © 2024 All Rights Reserved. KSTDC