ಈ ಸ್ಥಳದಲ್ಲಿ ಸಮಯವು ಇಲ್ಲೇ ನಿಲ್ಲಬೇಕೆಂದು ಭಾಸವಾಗುದಲ್ಲದೇ ನಾವು ಈ ಸ್ಥಳಕ್ಕೆ ಸಂಬಂಧಪಟ್ಟವರು ಎಂಬ ಭಾವನೆ ಬರುವುದು. ಅರಮನೆ ನಗರವಾದ ಮೆಜೆಸ್ಟಿಕ್ ಮೈಸೂರು ನಿರೀಕ್ಷೆಗಿಂತ ಹೆಚ್ಚಿನ ಆಕರ್ಷಣೆ ಹೊಂದಿದೆ.
ಭಾರತದ ಇತಿಹಾಸದಲ್ಲೇ ಅತೀ ಹೆಚ್ಚು ಕಾಳ ಆಳ್ವಿಕೆ ನಡೆಸಿದ ರಾಜವಂಶಗಳಲ್ಲಿ ಒಂದಾದ ‘ಒಡೆಯರು’ ಅರಮನೆಗಳ ನಗರ ಎಂದು ಖ್ಯಾತಿ ಪಡೆದ ಈ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು.
ಇದಲ್ಲದೇ, ಅಂಬಾ ವಿಲಾಸ್ ಅಥವಾ ಮೈಸೂರು ಅರಮನೆ ವಸ್ತು ಸಂಗ್ರಹಾಲಯ, ಹೋಟೆಲ್ ಇನ್ನಿತರೆ ಅನೇಕ ವಿಷಯಗಳಿಗೆ ಜನಪ್ರಿಯವಾಗಿರುತ್ತದೆ.
ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ನಡೆಯುವ ದಸರಾ ಮೆರವಣಿಗೆಯು ಭವ್ಯತೆಗೆ ಹೆಸರುವಾಸಿಯಾಗಿದೆ. ನಗರವು ವಿಶಾಲವಾದ ಮೃಗಾಲಯ ಹೊಂದಿದ್ದು, ಸದರಿ ಮೃಗಾಲಯವನ್ನು ರಾಯಕ್ ಪ್ರೋತ್ಸಾಹದಡಿಯಲ್ಲಿ ಪ್ರಾರಂಭಿಸಲಾಗಿದೆ ಮತ್ತು ಗೋಥಿಕ್ ಶೈಲಿಯಲ್ಲಿ ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್ ನಿರ್ಮಿಸಲಾಗಿದೆ.
ಹೋಟೆಲ್ ಮಯೂರ ಹೊಯ್ಸಳವು ಮೈಸೂರಿನ ಮಧ್ಯಬಾಗದಲ್ಲಿದ್ದು, ರೈಲು ನಿಲ್ದಾಣದ ಹತ್ತಿರದಲ್ಲಿರುವುದರಿಂದ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಅಲ್ಲದೆ ಸದರಿ ಹೋಟೆಲ್ ಪಾರಂಪಾರಿಕವಾದ ಕಟ್ಟಡದಲ್ಲಿ 13 ಹವಾನಿಯಂತ್ರಿತ ಡಬಲ್ ಬೆಡ್ರೂಮ್ ಮತ್ತು 18 ಉತ್ತಮ ಡಬಲ್ ಬೆಡ್ರೂಮ್ಗಳ ಸುಂದರವಾದ ವಸತಿ ಸೌಕರ್ಯ ಹೊಂದಿದೆ.
ದಯವಿಟ್ಟುಗಮನಿಸಿ: ಬುಕ್ಕಿಂಗ್ನಲ್ಲಿಒಮ್ಮೆತಿದ್ದುಪಡಿಮಾಡಿದನಂತರಮೊತ್ತೊಮ್ಮೆತಿದ್ದಪಡಿಮಾಡಲುಅಥವಾರದ್ದುಗೊಳಿಸಲುಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯುದಿನಾಂಕಮತ್ತುಕೊಠಡಿಯನ್ನುಮಾತ್ರಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿಯಮಯೂರಹೋಟೆಲ್ಗಳಲ್ಲಿಬದಲಾವಣೆಯನ್ನುಮಾಡುವಅವಕಾಶವನ್ನುಹೊಂದಿರುತ್ತದೆ.