info@kstdc.co | 080-4334 4334
ಬಜೆಟ್ ಹೋಟೆಲ್‌ಗಳು
ಹೋಟೆಲ್ ಮಯೂರ ವೇಲಾಪುರಿ ಬೇಲೂರು
ಅವಲೋಕನ
ಇಲ್ಲಿಗೆ ತಲುಪಲು
ಸ್ಥಳ
ದರ
ಸೌಲಭ್ಯಗಳು
ಮಾಡಬೇಕಾದ ಕೆಲಸಗಳು
ಗ್ಯಾಲರಿ
ಹೆಚ್ಚಿನ ಒತ್ತಡದಲ್ಲಿರುವವರು ವಿಶ್ರಾಂತಿಯನ್ನು ಪಡೆಯಲು ಹೊಸ ಜಾಗಕ್ಕೆ ತೆರಳಲು ಇಚ್ಛಿಸಿದರೆ , ಬೇಲೂರಿಗೆ ಪ್ರಯಾಣಿಸಬಹುದಾಗಿದೆ . ಏಕೆಂದರೆ , ಬೇಲೂರು ಉತ್ತಮವಾದ ಪ್ರಕೃತಿಕ ಸೌಂದರ್ಯವನ್ನು ಹೊಂದಿದೆ ಹಾಗೂ ಹೊಯ್ಸಳ ರಾಜವಂಶದ ರಾಜಧಾನಿಗಳಲ್ಲಿ ಒಂದಾದ ಬೇಲೂರು ಭವ್ಯವಾದ ಹೊಯ್ಸಳ ದೇವಾಲಯದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ . ಬೇಲೂರಿನ ದೇವಾಲಯಗಳು ಅದರ ಶ್ರೀಮಂತ ಸಾಂಸ್ಕ ø ತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ . ಚನ್ನಕೇಶವ ದೇವಸ್ಥಾನವು ಹೊಯ್ಸಳ ರಾಜ ವಿಷ್ಣುವರ್ಧನ ಕಾಲದಲ್ಲಿ ನಿರ್ಮಾಣಗೊಂಡಿರುತ್ತದೆ . ವೀರನಾರಾಯಣ ದೇವಸ್ಥಾನ , ಶ್ರೀದೇವಿ ದೇವಸ್ಥಾನ ಹಾಗೂ ಭೂದೇವಿ ದೇವಸ್ಥಾನಗಳು ದಕ್ಷಿಣ ಭಾರತದ ಭವ್ಯತೆಯ ಕಥೆಗಳನ್ನು ವಿವರಿಸುತ್ತದೆ .
ಹೋಟೆಲ್ ಮಯೂರ ವೇಲಾಪುರಿ ಬೇಲೂರು ಘಟಕಕ್ಕೆ ದೇವಾಲಯದ ಸಂಕೀರ್ಣದಿಂದ ಕಾಲುದಾರಿಯಲ್ಲಿ 05 ನಿಮಿಷದಲ್ಲಿ ತೆರಳಬಹುದಾಗಿದೆ ಮತ್ತು ದೇವಾಲಯಗಳ ಸೌಂದರ್ಯವನ್ನು ಆರಾಧಿಸುವವರಿಗೆ ಹೆಚ್ಚು ಸಮಯ ಕಳೆಯಲು ಬಯಸುವವರಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ . ಈ ಹೋಟೆಲ್ ಘಟಕವು 14 ಹವಾ ನಿಯತ್ರಿತ ಕೊಠಡಿ ಮತ್ತು ಹವಾ ರಹಿತ ಕೊಠಡಿಗಳನ್ನು ಹಾಗೂ 02 ವಸತಿ ನಿಲಯಗಳನ್ನು ಹೊಂದಿರುವುದರೊಂದಿಗೆ , ರೆಸ್ಟೋರೆಂಟ್ ಮತ್ತು ಬಾರ್‍ನ್ನು ಹೊಂದಿರುತ್ತದೆ .
ದೇವಸ್ಥಾನ ರಸ್ತೆ, ಬೇಲೂರು, ಹಾಸನ-573115
ಶ್ರೀ ಶ್ರೇಯಸ್ 8970650026
0817-7222209
belur@karnatakaholidays.net
By Air : ಮಂಗಳೂರು-154 ಕಿ.ಮೀ, ಬೆಂಗಳೂರು-245 ಕಿ.ಮೀ
By Rail: ಹಾಸನ-38 ಕಿ.ಮೀ
By Road : ಹಾಸನ-38 ಕಿ.ಮೀ, ಬೆಂಗಳೂರು-220 ಕಿ.ಮೀ
ಹವಾ ನಿಯಂತ್ರಿತ ಸೂಟ್
Weekday Rs.3409/-
Weekend Rs.3719/-
ಹವಾ ನಿಯಂತ್ರಿತ ಡಿಲಾಕ್ಸ್ ಡಬಲ್ ರೂಮ್
Weekday Rs.2530/-
Weekend Rs.2760/-
ಹವಾ ನಿಯಂತ್ರಿತ ಡಬಲ್
Weekday Rs.1980/-
Weekend Rs.2160/-
ಹವಾ ರಹಿತ ಡಬಲ್ ರೂಮ್
Weekday Rs.1319/-
Weekend Rs.1439/-
8 ಹಾಸಿಗೆಗಳ ಕುಟುಂಬ ಕೊಠಡಿ
Weekday Rs.2500/-
Weekend Rs.2500/-
Sightseeing activities:
Chennakesava Temple – 0.6km
Yagachi Dam – 2.7km
Chikkamagaluru – 25.4km
Shakleshpura – 34.2km
For more sightseeing places and details contact the hotel front desk
ಸೂಚನೆ
ಸೂಚನೆ :
ಇಲ್ಲಿ ಪ್ರದರ್ಶಿಸಲಾದ ದರಗಳು ಮೂಲ ದರಗಳಾಗಿರುತ್ತದೆ ( ತೆರಿಗೆ ಹೆಚ್ಚುವರಿ )
ಈ ಮೇಲಿನ ದರಗಳಲ್ಲಿ ಕಾಲ ಕಾಲಕ್ಕನುಗುಣವಾಗಿ ದರಗಳನ್ನು ಹೆಚ್ಚಿಸಲಾಗುವುದು .
ಷರತ್ತು ಮತ್ತು ನಿಬಂಧನೆಗಳು
ಹೋಟೆಲ್ ಬುಕ್ಕಿಂಗ್‍ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು :
ಚೆಕ್ ಇನ್ ಸಮಯ ಮಧ್ಯಾಹ್ನ 1.00 ಗಂಟೆ . ಸದರಿ ಸಮಯಕ್ಕಿಂತ ಮುಂಚೆ ಚೆಕ್ ಇನ್ ಮಾಡಲು ಬಯಸುವ ಮನವಿಯನ್ನು ಲಭ್ಯತೆಗನುಗುಣವಾಗಿ ಪರಿಗಣಿಸಲಾಗುವುದು .
ಚೆಕ್ ಔಟ್ ಸಮಯ ಬೆಳಿಗ್ಗೆ 11.00 ಗಂಟೆ .
ಬುಕ್ಕಿಂಗ್‍ಗಳಲ್ಲಿ ಒಮ್ಮೆ ಮಾತ್ರ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದ್ದು , ಕನಿಷ್ಠ ಚೆಕ್ ಇನ್ ದಿನಾಂಕದ 24.00 ಗಂಟೆಗಳ ಮೊದಲು ತಿದ್ದಪಡಿ ಮಾಡಲು ಅವಕಾಶವಿರುತ್ತದೆ .
ದಯವಿಟ್ಟು ಗಮನಿಸಿ : ಬುಕ್ಕಿಂಗ್‍ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ . ಅಲ್ಲದೇ , ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ , ಕೆ . ಎಸ್ . ಟಿ . ಡಿ . ಸಿ ಯ ಮಯೂರ ಹೋಟೆಲ್‍ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ .
ಸುಂಕವು ತೆರಿಗಳನ್ನು ಹೊರತುಪಡಿಸಿರುತ್ತದೆ .
ಪ್ರದರ್ಶಿತ ದರಗಳು ಮೂಲ ದರಗಳಾಗಿರುತ್ತವೆ ( ಜಿ . ಎಸ್ . ಟಿ . ಹೆಚ್ಚುವರಿಯಾಗಿರುತ್ತದೆ ).
ಕಾಲೋಚಿತ ಹೆಚ್ವಳವು ಮೂಲ ಸುಂಕದ ಮೇಲೆ ಇರುತ್ತದೆ .
ಚಕ್ ಇನ್ ದಿನದಂದು ಹೆಚ್ಚುವರಿಯಾಗಿ ಹಾಸಿಗೆ ಪಡೆದಲ್ಲಿ ಅಥವಾ ಹೆಚ್ಚುವರಿ ವ್ಯಕ್ತಿ ಇದ್ದಲ್ಲಿ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತದೆ .
ಷರತ್ತು ಮತ್ತು ನಿಯಮಗಳನ್ನೊಳಪಟ್ಟು , ಚೆಕ್ ಇನ್ ದಿನಾಂಕದಂದು ಹೋಟೆಲ್‍ನಲ್ಲಿಯೇ ಪಾವತಿಸುವ ಆಯ್ಕೆ ಸಹ ಲಭ್ಯವಿರುತ್ತದೆ .
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
07 ದಿನಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ , ಪೂರ್ಣ ಮೊತ್ತವನ್ನು ಮರುಪಾವತಿ ಮಾಡಲಾಗುವುದು .
07 ದಿನಗಳೊಳಗೆ ಅಥವಾ 48 ಗಂಟೆಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ 25% ಮೊತ್ತವನ್ನು ಕಡಿತಗೊಳಿಸಿ , ಪಾವತಿಸಲಾಗುವುದು .
ಚೆಕ್ ಇನ್ ದಿನಾಂಕದ 24 ಗಂಟೆಗಳೊಳಗೆ ಬುಕ್ಕಿಂಗ್ ರದ್ದುಪಡಿಸಿದ್ದಲ್ಲಿ ಯಾವುದೇ ಮರುಪಾವತಿ ಮಾಡಲಾಗುವುದಿಲ್ಲ .
ಕಾಲೋಚಿತವಲ್ಲದ ಸಂದರ್ಭ ಅಂದರೆ , ಜನವರಿ , ಫೆಬ್ರವರಿ , ಮಾರ್ಚ್ , ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ .
24 ಗಂಟೆಗಳ ಮುಂಚಿತವಾಗಿ ರದ್ದುಪಡಿಸಿದಲ್ಲಿ , ಯಾವುದೇ ರದ್ದತಿ ಶುಲ್ಕಗಳಿರುವುದಿಲ್ಲ
24 ಗಂಟೆಗಳೊಳಗಾಗಿ ರದ್ದುಪಡಿಸಿದಲ್ಲಿ , ಯಾವುದೇ ಮರುಪಾವತಿ ಇರುವುದಿಲ್ಲ .
Copyright © 2024 All Rights Reserved. KSTDC