ನಿಗಮದ ಆಸ್ತಿಯಾಗಿರುವ ಪ್ಯಾರಾಡೈಸ್ ವೈಲ್ಡ್ ಹಿಲ್ಸ್ ರೆಸಾರ್ಟ್‍ನ್ನು ನಿರ್ವಹಣೆ ಮಾಡಲು ಒಪ್ಪಂದದ ಆಧಾರದ ಮೇಲೆ ಗುತ್ತಿಗೆಗೆ ನೀಡಲಾಗಿರುತ್ತದೆ. ಈ ರೆಸಾರ್ಟ್ ಸೊಂಪಾದ ಮತ್ತು ರಮಣೀಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದ್ದು, ಕರ್ನಾಟಕ ಪ್ರಸಿದ್ಧ ದೇವಾಲಯಗಲ್ಲಿ ಒಂದಾದ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಾಸ್ಥಾನದಿಂದ ಕೇವಲ 20 ನಿಮಿಷಗಳ ದೂರದಲ್ಲಿದೆ. ಈ ಸ್ಥಳವು ಪ್ರಕೃತಿ ಪ್ರಿಯರು, ಟ್ರಕ್ಕಿಂಗ್ ಮಾಡಲು ಬಯಸುವವರಿಗೆ ಮತ್ತು ತೀರ್ಥಯಾತ್ರೆಯ ಪ್ರಯಾಣಿಕರಿಗೆ ವಿಶ್ರಮಿಸಲು ಉತ್ತಮ ಸ್ಥಳವಾಗಿದೆ.
ಪ್ಯಾರಾಡೈಸ್ ರೆಸಾರ್ಟ್ ಪಶ್ಚಿಮ ಘಟ್ಟದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಐಷಾರಾಮಿ ರೆಸಾರ್ಟ್ ಆಗಿದೆ. ಈ ರೆಸಾರ್ಟ್‍ಗೆ ಆಗಮಿಸುವ ಅತಿಥಿಗಳು ಕೊಡಚಾದ್ರಿ ಬೆಟ್ಟದ ಸೌಂದರ್ಯವನ್ನು ವೀಕ್ಷಿಸುವುದರೊಂದಿಗೆ, ಪ್ರಶಾಂತವಾದ ಪರಿಸರದ ಮಡಿಲಿನಲ್ಲಿ ಸಂಪೂರ್ಣ ತನ್ಮಯರಾಗಿ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಬಹುದಾಗಿದೆ. ಇಲ್ಲಿ ಬೀಸುವ ತಂಗಾಳಿ, ಹಕ್ಕಿಗಳ ಕಲರವ ಮತ್ತು ಹಸಿರಿನಿಂದ ಕೂಡಿದ ವಾತಾವರಣ ಅತಿಥಿಗಳಿಗೆ ಒಂದು ಹೊಸ ಅನುಭವವನ್ನು ನೀಡುವುದರೊಂದಿಗೆ ಮನಸ್ಸಿಗೆ ಹೊಸ ಹುರುಪನ್ನು ಮೂಡಿಸುತ್ತದೆ.
ಇಲ್ಲಿಗೆ ಆಗಮಿಸುವ ವಿವಿಧ ಮಾದರಿಯ ಅಥಿಥಿಗಳಾದ ಮಕ್ಕಳು, ಪೋಷಕರು, ಯಾತ್ರಿಕರು, ಚಾರಣಿಗರಿಗೆ ಬೇಸರಗೊಳ್ಳಲು ಯಾವುದೇ ಅವಕಾಶವನ್ನು ನೀಡದೇ, ಕ್ರಿಯಾಶೀಲರಾಗಿರಲು ಯಾವುದಾದರು ಚಟುವಟಿಕೆಗಳನ್ನು ಆಯೋಜಿಸುತ್ತೇವೆ. ಪ್ಯಾರಾಡೈಸ್‍ನಲ್ಲಿ ವಿವಿಧ ಮಾದರಿಯ ಒಳಾಂಗಣ ಆಟಗಳಾದ ಟೆನ್ನಿಸ್ ಕೋರ್ಟ್, ಬಾಸ್ಕೆಟ್ ಕೋರ್ಟ್, ಸೈಕ್ಲಿಂಗ್ ಹಾಗೂ ಮುಂತಾದ ಚಟುವಟಿಕೆಗಳನ್ನು ಹೊಂದಿರುತ್ತದೆ. ಒಂದು ವೇಳೆ ನೀವು ರಜಾ ದಿನಗಳಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ಮಾಡದೇ ಕೇವಲ ವಿಶ್ರಾಂತಿಯನ್ನು ಬಯಸುವುದಾದರೆ ನಮ್ಮ ರೆಸಾರ್ಟ್‍ನಲ್ಲಿ ಸ್ನೇಹಶೀಲ ಕೊಠಡಿಗಳು ಮತ್ತು ರೆಸಾರ್ಟ್‍ನ ಸುತ್ತಮುತ್ತಲಿನ ಪರಿಸರವು ನಿಮಗೆ ಸಹಾಯಕವಾಗಿದೆ.
ನಮ್ಮ ರೆಸಾರ್ಟ್‍ನಲ್ಲಿ ಪ್ರತ್ಯೇಕ ಸಸ್ಯಹಾರಿ ಮತ್ತು ಮಾಂಸಹಾರಿ ರೆಸ್ಟೋರೆಂಟ್ ಲಭ್ಯವಿದ್ದು, ಅತಿಥಿಗಳಿಗೆ ಪ್ರೀತಿ ಮತ್ತು ಕಾಳಜಿಯಿಂದ ರುಚಿಯಾದ ಅಡುಗೆಯನ್ನು ತಯಾರಿಸಿ ನೀಡಲಾಗುವುದು.
ರೆಸಾರ್ಟ್‍ಗೆ ಆಗಮಿಸುವ ಸಸ್ಯಹಾರಿ ಅತಿಥಿಗಳಿಗೆ ಮಾಲ್ಗುಡಿ ಕೆಫೆ ಯು ದಕ್ಷಿಣ ಭಾರತದ ಅತ್ಯಂತ ರುಚಿಯಾದ ಆಹಾರವನ್ನು ತಯಾರಿಸಿ ನೀಡುತ್ತದೆ ಹಾಗೂ ಮಾಂಸಹಾರಿ ಅತಿಥಿಗಳಿಗೆ ಸೀಶೆಲ್ಸ್ ರೆಸ್ಟೋರೆಂಟ್ ನವರು ಕರಾವಳಿ ಸಮುದ್ರ ಪ್ರದೇಶದ ಮಾದರಿಯಲ್ಲಿ ಆಹಾರವನ್ನು ತಯಾರಿಸಿ ಒದಗಿಸುತ್ತದೆ. ಎಲ್ಲ ಸಮುದ್ರದ ಆಹಾರಗಳು ಮಲ್ಪೆ ಬಂದರಿನಿಂದ ಸರಬರಾಜು ಮಾಡಿಕೊಳ್ಳುವುದರಿಂದ ತಾಜಾತನವನ್ನು ಹೊಂದಿರುತ್ತದೆ.
ನೀವು ನಿಮ್ಮ ರಜಾ ದಿನಗಳನ್ನು ಪರ್ವತವಿರುವ ಭೂ ಪ್ರದೇಶಗಳಲ್ಲಿ ಕಳೆಯಲು ಬಯಸಿದರೆ, ಕರ್ನಾಟಕದ ಕೊಡಚಾದ್ರಿಯಲ್ಲಿರುವ ಸುಂದರವಾದ ಪ್ಯಾರಾಡೈಸ್ ರೇಸಾರ್ಟ್‍ಗೆ ಭೇಟಿ ನೀಡಿ. ಇದು ಬೆಂಗಳೂರಿನಿಂದ ಕೇವಲ 400 ಕಿ.ಮೀ ದೂರ ಹಾಗೂ ಉಡುಪಿಯಿಂದ ಪ್ರಯಾಣವಾಗಿದ್ದು, ಇದು ಕರ್ನಾಟಕದ ನೈಸರ್ಗಿಕ ಪರಂಪಡೆ ಮತ್ತು ಸೌಂದರ್ಯವನ್ನು ಅನ್ವೇಷಿಸುವ ಪ್ರಯಾಣಿಕರಿಗೆ ಸೂಕ್ತವಾದ ಸ್ಥಳವಾಗಿದೆ.
ಸೂಚನೆ:
ಹೋಟೆಲ್ ಬುಕ್ಕಿಂಗ್‍ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
ದಯವಿಟ್ಟು ಗಮನಿಸಿ: ಬುಕ್ಕಿಂಗ್‍ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್‍ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.