ಅತ್ಯಂತ ಅತಿರಂಜಿತ ಹೋಟೆಲ್ ಅನುಭವಕ್ಕಾಗಿ ಮಯೂರ ಹೋಟೆಲ್ಸ್‍ಗಳಿಗೆ ಭೇಟಿ ನೀಡಬಹುದು. ಪ್ರತಿ ಅತಿಥಿ, ಕುಟುಂಬ ಹಾಗೂ ಸ್ನೇಹಿತರ ಗುಂಪಿಗೆ ಐಶಾರಾಮಿ ಕೊಠಡಿ, ಉತ್ತಮ ಆತಿಥ್ಯ ಮತ್ತು ಸ್ವಾದಿಷ್ಟ ಪಾಕಪದ್ಧತಿಯನ್ನು ಕರ್ನಾಟಕದಾದ್ಯಂತ ನೀಡುತ್ತಿದೆ.
ಕರ್ನಾಟಕಕ್ಕೆ ಪ್ರವಾಸ ಕೈಗೊಳ್ಳುವ ಯೋಜನೆ ಇದೆಯೇ?
ನಿಮ್ಮ ರಜಾ ದಿನಗಳನ್ನು ಆನಂದಿಸಿ, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ.
ಹೊಸ ಕುಮಾರಕೃಪಾ ಅತಿಥಿಗೃಹವು ಬೆಂಗಳೂರು ನಗರದ ಮಧ್ಯದಲ್ಲಿದ್ದು, ಇದು 18 ರಂಧ್ರಗಳ ಗಾಲ್ಫ್ ಕೋರ್ಸ್‍ನ ಪಕ್ಕದಲ್ಲಿದೆ. ಹೊಸ ಕುಮಾರಕೃಪಾ ಅತಿಥಿಗೃಹವು ಇಸಿಬಿಎ ಸೇರಿದಂತೆ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುತ್ತದೆ. ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು ಕಟ್ಟಡ ಕ್ಷೇತ್ರದಲ್ಲಿ ಇಂಧನ ದಕ್ಷತೆಯನ್ನು ಉತ್ತೇಜಿಸಲು ಮೊದಲ ಹೆಜ್ಜೆಯಾಗಿ ಶಕ್ತಿ ಸಂರಕ್ಷಣಾ ಕಟ್ಟಡ ಕೋಡ್ (ಇಸಿಬಿಸಿ) ಅನ್ನು 2007ರ ಮೇ ತಿಂಗಳಿನಲ್ಲಿ ಪ್ರಾರಂಭಿಸಲಾಯಿತು ಮತ್ತು ಕುಮಾರಕೃಪಾ ಅತಿಥಿಗೃಹ ಹೊಸ ಕಟ್ಟಡವು ಕರ್ನಾಟಕದಲ್ಲಿ ಈ ವೈಶಿಷ್ಟ್ಯವನ್ನು ಮೊದಲನೆಯದಾಗಿ ಅಳವಡಿಸಿಕೊಂಡಿದೆ. ಸಂಪೂರ್ಣ ಅತಿಥಿಗೃಹದಲ್ಲಿ ಸಂವೇದಕ ಎಲ್.ಇ.ಡಿ ಲೈಟ್ಸ್ ಗಳನ್ನು ಹಾಗೂ ಉಷ್ಣಾಂಶ ಮತ್ತು ಶೀತಲತೆಯು ತಾಪಮಾನವನ್ನು ಸರಿದೂಗಿಸಲು ವೆರಿಯೇಬಲ್ ರೆಫ್ರಿಜರೇಟರ್ ಪ್ಲೋ ವನ್ನು ಅಳವಡಿಸಲಾಗಿರುತ್ತದೆ.
ಅತಿಥಿಗೃಹವು ಡಿಲಾಕ್ಸ್ ರೂಮ್‍ಗಳನ್ನು ಹೊಂದಿದ್ದು, ವಿಶಾಲವಾದ ಮಲಗುವ ಕೋಣೆ ಮತ್ತು ಸ್ನಾನಗೃಹವನ್ನು ಹೊಂದಿದ್ದು, ಎಲ್.ಇ.ಡಿ ಟಿ.ವಿ, ಕೇಂದ್ರೀಕೃತ ಎ.ಸಿಯೊಂದಿಗೆ ಬಿಸಿ ನೀರಿನ ವ್ಯವಸ್ಥೆಗೆ ಸೋಲಾರ್ ಹಾಗೂ ಹೀಟ್ ಪಂಪ್‍ನ್ನು ಅಳವಡಿಸಲಾಗಿರುತ್ತದೆ. 24 ಗಂಟೆಗಳ ಸ್ವಾಗತ ಕೌಂಟರ್, ರೆಸ್ಟೋರೆಂಟ್, ಕೊಠಡಿ ಸೇವೆಯೊಂದಿಗೆ ಜಿಮ್, ಗ್ರಂಥಾಲಯ, ವ್ಯಾಪಾರ ಕೇಂದ್ರ, ಪತ್ರಿಕೆಗಳು, ಟಿ.ವಿ ಚಾನೆಲ್‍ಗಳು, ವೇಕಪ್ ಕರೆ, ವಾಹನಗಳ ಪಾರ್ಕಿಂಗ್, ಹೌಸ್‍ಕೀಪಿಂಗ್ ಸೇವೆ, ಲಾಂಡ್ರಿ ಸೇವೆ, ವೈದ್ಯಕೀಯ ವ್ಯವಸ್ಥೆ, ವೀಲ್ ಚೇರ್, ವೈಟಿಂಗ್ ಲಾಂಗ್, ಗಾರ್ಡನ್ ಗಳ ಸೌಲಭ್ಯವನ್ನು ಹೊಂದಿರುತ್ತದೆ.
ಮಾಲಿನ್ಯ ಹಾಗೂ ಅವ್ಯವಸ್ಥೆಯಿಂದ ದೂರು ಉಳಿದಿರುವ ಪ್ರದೇಶವೆಂದರೆ ಮಡಿಕೇರಿ. ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಸ್ವರ್ಗದಂತೆ ಭಾಸವಾಗುವುದಲ್ಲದೇ ಪ್ರಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ.
ಯಾವುದೇ ಕಾಲಮಾನದಲ್ಲಿ ಭೇಟಿ ನೀಡಿದರೂ ಉತ್ತಮ ಅನುಭವ ನೀಡುತ್ತದೆ. ದಟ್ಟವಾದ ಅರಣ್ಯದ ಲವ್ಲಿ ಗಿರಿದಾಮದಲ್ಲಿ ಮಡಿಕೇರಿ ನೆಲೆಸಿದ್ದು, ಉತ್ತಮ ಕಾಫೀ ತೋಟ ಮತ್ತು ಆಶ್ವರ್ಯಕರ ಜಲಪಾತವನ್ನೊಳಗೊಂಡ ಮಡಿಕೇರಿಯು ತನ್ನ ಸಾಂಪ್ರದಾಯಕ ರುಚಿಯ ಪಾಕಪದ್ದತಿಯನ್ನು ಹೊಂದಿದೆ. ಕೊಡಗು ಜಿಲ್ಲೆಯ ಆಕರ್ಷಕ ರಾಜಧಾನಿಯಾದಂತಹ ಮಡಿಕೇರಿಯು ಪ್ರಾಚೀನ ಕಾಲದ ಆಕರ್ಷಕ ನೋಟವನ್ನು ಹೊಂದಿದೆ ಹಾಗೂ ರೆಡ್ ರೂಫಡ್ ಗುಂಪು ಸಮುದಾಯ ಮತ್ತು ಉತ್ತಮ ಮಾರುಕಟ್ಟೆಯನ್ನು ಸಹ ಹೊಂದಿದೆ.
ಮಡಿಕೇರಿಯು ಸಾಕಷ್ಟು ಪಿಕ್ನಿಕ್ ಸ್ಥಳಗಳನ್ನು ಒದಗಿಸುದಲ್ಲದೇ, ಕೆಲವೊಂದು ಆಸಕ್ತÀ ಚಟುವಟಿಕೆಗಳಾದ ಟ್ರಕ್ಕಿಂಗ್, ಬೆಟ್ಟ ಹತ್ತುವುದು ಹಾಗೂ ನದಿಯಲ್ಲಿನ ದೋಣಿ ವಿಹಾರ ಇತ್ಯಾದಿಗಳನ್ನು ಸಹ ಒದಗಿಸುತ್ತದೆ.
ಮಡಿಕೇರಿ ಬೆಟ್ಟದ ಅಂಚಿನಲ್ಲಿರುವ ಹೋಟೆಲ್ ಮಯೂರ ವ್ಯಾಲಿ ವ್ಯೂ ಮಡಿಕೇರಿ ಘಟಕವು ಸದರಿ ಸ್ಥಳದ ಆಕರ್ಷಕ ನೋಟವನ್ನು ಸವಿಯಲು ಉತ್ತಮ ಸ್ಥಳವಾಗಿದೆ.
ವ್ಯಾಲಿ ವ್ಯೂ ಮಡಿಕೇರಿ ಹೋಟೆಲ್ ಒಟ್ಟು 36 ಹವಾ ನಿಯಂತ್ರಿತ ಕೊಠಡಿಗಳು ಮತ್ತು ಉತ್ತಮ ದರ್ಜೆಯ ಡಬಲ್ ಬೆಡ್ ಕೊಠಡಿಗಳನ್ನು ಹೊಂದಿದೆ. ಬಾರ್ ವ್ಯವಸ್ಥೆಯನ್ನೊಳಗೊಂಡ ರೆಸ್ಟೋರೆಂಟ್ ಹೊಂದಿದ್ದು, ಕೊಡಗು ಶೈಲಿಯ ಪಾಕಪದ್ಧತಿಯನ್ನು ಅಳವಡಿಸಲಾಗಿರುತ್ತದೆ. ಅಲ್ಲದೇ, ಘಟಕಕ್ಕೆ ಬರುವ ಪ್ರವಾಸಿಗರಿಗೆ ಮಡಿಕೇರಿ ಸುತ್ತಮುತ್ತಲಿನ ಸ್ಥಳ ವೀಕ್ಷಣೆಯ ಸೌಲಭ್ಯವನ್ನು ಹೊಂದಿದ್ದು, ಉತ್ತಮ ಸವಿನೆನಪುಗಳನ್ನು ಕಲೆಹಾಕಬಹುದು.
ಶ್ರೀರಂಗಪಟ್ಟಣವು ಗಮನಾರ್ಹ ಇತಿಹಾಸ ಹಾಗೂ ವಾಸ್ತುಶಿಲ್ಪದ ದ್ವೀಪ ಪಟ್ಟಣವಾಗಿದ್ದು, ಶ್ರೀರಂಗಪಟ್ಟಣವು ಪ್ರಾಚೀನ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ಗುಂಬಜ್ ಮಾದರಿಯಲ್ಲಿನ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಸಮಾಧಿಗೆ ಹೆಸರುವಾಸಿಯಾಗಿದೆ. ನೀವು ಈ ಸ್ಥಳಕ್ಕೆ ಭೇಟಿ ನೀಡಿದಾಗ ಅರಮನೆಗಳು, ಕೋಟೆಗಳು, ಕತ್ತಲಕೋಣೆಗಳುಮ ಮಸೀದಿಗಳಿಗಿಂತ ಹೆಚ್ಚಿನ ಪ್ರೇಕ್ಷಣೀಯ ಸ್ಥಳಗಳು ತೆರೆದುಕೊಳ್ಳುತ್ತವೆ.
ಹೋಟೆಲ್ ಮಯೂರ ರಿವರ್ ವ್ಯೂ ಕಾವೇರಿ ನದಿ ದಂಡೆಯಲ್ಲಿದ್ದು, ಇಲ್ಲಿನ ವಾಸ್ತವ್ಯ ನಿಮಗೆ ಸುಂದರವಾದ ಅನುಭವವನ್ನು ನೀಡುತ್ತದೆ. ಈ ಹೋಟೆಲ್‍ನಲ್ಲಿ 26 ಸುಂದರವಾದ ಕೊಠಡಿಗಳಿದ್ದು, 06 ಕೊಠಡಿಗಳು ನದಿಯ ಕಡೆಗೆ ಮುಖ ಮಾಡಿಕೊಂಡಿದ್ದು, ರೆಸ್ಟೋರೆಂಟ್ ಮತ್ತು ಬಾರ್ನ ಪಕ್ಕದಲ್ಲಿಯೇ ಇರುವುದರಿಂದ ನಿಮಗೆ ಸ್ಮರಣೀಯ ಅನುಭವವನ್ನು ನೀಡುತ್ತದೆ. ಇಲ್ಲಿಗೆ ಆಗಮಿಸುವ ಅತಿಥಿಗಳಿಗೆ ಬೋಟಿಂಗ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗುವುದು.
ಮತ್ತೆ ಮತ್ತೆ ನೋಡಬೇಕೆನಿಸುವ ಒಂದು ಸುಂದರ ತಾಣವೆಂದರೆ ಹಂಪಿ. ಆಕರ್ಷಿಸುವ ಸೂರ್ಯಾಸ್ತ, ದಿಗಂತಗಳು, ವಾಸ್ತವಿಕವೆನಿಸುವ ಭೂದೃಶ್ಯಗಳು, ವಿಶಾಲ ಆಕಾಶ ಮತ್ತು ಭವ್ಯವಾದ ದೇವಾಲಯಗಳಿಗೆ ಹಂಪಿ ಹೆಸರುವಾಸಿಯಾಗಿದ್ದು, ಮನಃಶಾಂತಿಯನ್ನು ನೀಡುತ್ತದೆ. ಹಂಪಿಯ ವಿಶೇಷತೆಯನ್ನು ಪದಗಳಲ್ಲಿ ವರ್ಣಿಸಲು ಸಾದ್ಯವಿಲ್ಲ. ರಾಯಲ್ ಸೆಂಟರ್ ಮತ್ತು ಸೇಕ್ರೆಡ್ ಸೆಂಟರ್ ಎಂಬ ಎರಡು ಪ್ರದೇಶಗಳಲ್ಲಿರುವ ಪುರಾತನ ಅವಶೇಷಗಳನ್ನು ನೋಡಿದ್ದಲ್ಲಿ ಮನಸ್ಸಿಗೆ ಹಿಂದೆಂದೂ ಇಲ್ಲದ ಸಂತೋಷವಾಗುವುದು.
ಹಂಪಿಯಲ್ಲಿರುವ ಹೋಟೆಲ್ ಮಯೂರ ಭುವನೇಶ್ವರಿ, ಕಮಲಾಪುರ ಇದು ವಿಶ್ವ ಪರಂಪರೆಯ ತಾಣ ವ್ಯಾಪ್ತಿಯಲ್ಲಿರುವ ಏಕೈಕ ಹೋಟೆಲ್ ಆಗಿದೆ. ಇದು 30 ರೂಮ್‍ಗಳನ್ನೊಳಗೊಂಡ ನವೀಕರಿಸಲಾಗಿರುವ ಹೋಟೆಲ್ ಆಗಿದ್ದು, ಹವಾ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ ಮತ್ತು 06 ವಸತಿ ನಿಲಯಗಳನ್ನು ಸಹ ಹೊಂದಿರುತ್ತದೆ.
ಬರುವ ಅತಿಥಿಗಳಿಗೆ ಕಾಂಟಿನೆಂಟಲ್ ಮತ್ತು ಭಾರತೀಯ ಪಾಕ ಪದ್ಧತಿಯೊಂದಿಗೆ ಹಂಪಿಯ ಸವಿರುಚಿಯನ್ನು ಆನಂದಿಸಬಹುದು ಮತ್ತು ಉತ್ತಮ ರೆಸ್ಟೋರೆಂಟ್ ವ್ಯವಸ್ಥೆಯನ್ನು ಪಡೆಯಬಹುದು.
ಸದರಿ ಹೋಟೆಲ್‍ನಲ್ಲಿ ಪ್ರವಾಸಿ ಮಾರ್ಗದರ್ಶಿಗಳೊಂದಿಗೆ ಪ್ರವಾಸಗಳನ್ನು ಕೈಗೊಳ್ಳುವ ವ್ಯವಸ್ಥೆ ಇರುತ್ತದೆ.
ರಜಾ ದಿನಗಳಲ್ಲಿ ಒಂದು ಹೊಸ ಸ್ಥಳವಾದ ಅನ್ವೇಷಣೆಯಲ್ಲಿದ್ದರೆ ವಿಜಯಪುರಕ್ಕೆ ಭೇಟಿ ನೀಡಿ. ಬಿಜಾಪುರದ ಆದಿಲ್ ಶಾಹಿ ರಾಜವಂಶದ ಆಡಳಿತವು ಐತಿಹಾಸಿಕವಾಗಿ ಶ್ರೀಮಂತ ಡೆಕ್ಕನ್ ಪ್ರದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಅವರ ಕೊಡುಗೆಯ ಅನೇಕ ವಿಸ್ಮಯಕಾರಿ ಸ್ಮಾರಕಗಳಲ್ಲಿ ಗೋಲ್‍ಗುಂಬಜ್ ಸ್ಮಾರಕವು ಮೊದಲನೇ ಸ್ಥಾನವನ್ನು ಪಡೆದಿದ್ದು, ಭೂದೃಶ್ಯಗಳು, ಮಸೀದಿಗಳು, ಅರಮನೆಗಳು ಮತ್ತು ವಾಚ್–ಟವರ್ಗಳು ಬಿಜಾಪುರಕ್ಕೆ ವಿಶಿಷ್ಟವಾದ ಗುರುತನ್ನು ನೀಡುತ್ತದೆ.
ಹೋಟೆಲ್ ಮಯೂರ ಆದಿಲ್ ಶಾಹಿ ಬಿಜಾಪುರ ಘಟಕವು ಗೋಲ್ ಗುಂಬಜ್ ನಿಂದ ಸ್ವಲ್ಪ ದೂರದಲ್ಲಿದ್ದು, ಸ್ಮಾರಕದ ಅದ್ಭುತವಾದ ನೋಟವನ್ನು ನೀಡುತ್ತದೆ. ಈ ಹೋಟೆಲ್ ಘಟಕವು 4 ಡಬಲ್ ಬೆಡ್ ರೂಮ್‍ಗಳನ್ನು ಹೊಂದಿದೆ ಹಾಗೂ ಘಟಕಕ್ಕೆ ಆಗಮಿಸುವ ಅತಿಥಿಗಳಿಗೆ ಅತ್ಯುತ್ತಮ ಆಹಾರವನ್ನು ಒದಗಿಸಲು ರೆಸ್ಟೋರೆಂಟ್‍ನ್ನು ಹೊಂದಿರುತ್ತದೆ.
ಆಶ್ಚರ್ಯಕರ ನೋಟಗಳು, ಮನಸ್ಸಿಗೆ ಮುದ ನೀಡುವ ಹಾಗೂ ವಾಸ್ತವಿಕವಾದ ಅನುಭವಗಳಿಂದ ಆವೃತವಾಗಿರುವ ನಂದಿ ಬೆಟ್ಟ ಸ್ಥಳವು ಸ್ವರ್ಗದಂತೆ ಭಾಸವಾಗುತ್ತದೆ ಮತ್ತು ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಅತ್ಯುತ್ತಮ ಸ್ಥಳವಾಗಿದೆ.
ನಂದಿ ಬೆಟ್ಟವು ನಗರದ ಸ್ವಂತ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ. ದೂರದಲ್ಲಿರುತ್ತದೆ.
ಸಮುದ್ರ ಮಟ್ಟದಿಂದ 1455 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ಪ್ರಶಾಂತ ವಾತಾವರಣ ಮತ್ತು ತಾಜಾ ಗಾಳಿಯನ್ನು ನೀಡುವ ತಾಣವಾಗಿದ್ದು, ಬೇಸಿಗೆ ತಾಪ ಕಳೆಯಲು ಟಿಪ್ಪು ಸುಲ್ತಾನ ಮತ್ತು ಬ್ರಿಟಿಷರು ಈ ಸ್ಥಳವನ್ನು ಬಳಸುತ್ತಿದ್ದರು.
ನಂದಿ ಬೆಟ್ಟವು ಒಂದು ಪರಿಪೂರ್ಣ ಹಾಗೂ ಧೀರ್ಘ ಮನೋಲ್ಲಾಸ ತಾಣವಾಗಿದ್ದು, ಸಾಹಸಪ್ರಿಯರಿಗೆ ಉತ್ತಮ ಸ್ಥಳವಾಗಿದೆ. ಸದರಿ ಸ್ಥಳ ಎರಡು ಪ್ರಾಚೀನ ಶಿವನ ದೇವಾಲಯಗಳನ್ನು ಹೊಂದಿದ್ದು, ಒಂದು ದೇವಾಲಯವು ಬೆಟ್ಟದ ಪಾದದಲ್ಲಿ ಮತ್ತು ಇನ್ನೊಂದು ದೇವಾಲಯವು ಶಿಖರದಲ್ಲಿದ್ದು, ಬೆಟ್ಟಕ್ಕೆ ಆಕರ್ಷಕವಾಗಿದೆ.
ಹೋಟೆಲ್ ಮಯೂರ ನಂದಿಬೆಟ್ಟವು, ಬೆಟ್ಟದ ಶಿಖರದಲ್ಲಿ 17 ಕೊಠಡಿಗಳ ವಸತಿ ಗೃಹ, ಡಿಲೆಕ್ಸ್ ರೂಮ್ (ಗಾಂಧೀ ನಿಲಯ), ಡಬಲ್ ರೂಮ್ (ಗಾಂಧಿ ನಿಲಯ ನ್ಯೂ ಬ್ಲಾಕ್) ಹೊಂದಿದೆ. ಅಲ್ಲದೇ, ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ರೆಸ್ಟೋರೆಂಟ್ ವ್ಯವಸ್ಥೆಯನ್ನು ಹೊಂದಿರುತ್ತದೆ.
ಸೂಚನೆ: ಸಂಜೆ 6.00 ಗಂಟೆಯೊಳಗೆ ಚೆಕ್ ಇನ್ ಆಗಬೇಕಾಗಿರುತ್ತದೆ.
ಊಟಿ ಪ್ರದೇಶದ ಸೌಂದರ್ಯವು ಒಂದು ಸಮ್ಮೋಹನ ಅನುಭವವಾಗಿರುತ್ತದೆ. ಮಾನ್ಸೂನ್ ಸಮಯದಲ್ಲಿ ಒಂದು ಮಾಯಾಲೋಕದಂತೆ ರೂಪುಗೊಳ್ಳುವ ಗಿರಿದಾಮವು ಹೆಚ್ಚಿನ ಸಮಯ ಇರುವಂತೆ ಪ್ರೇರೆಪಿಸುತ್ತದೆ.
ಮೈಸೂರಿನಿಂದ ಕೇವಲ 03 ಗಂಟೆಗಳ ಪ್ರಯಾಣವಿರುವ ಊಟಿ ಪ್ರದೇಶವು ತಮಿಳುನಾಡಿನಲ್ಲಿದ್ದು, ರಜಾ ದಿನಗಳನ್ನು ಕಳೆಯುವವರಿಗೆ, ಅಲೆದಾಡಲು ಬಯಸುವವರಿಗೆ ಹಾಗೂ ನಗರ ಜೀವನದಿಂದ ಬೇಸತ್ತು ವಿಶ್ರಾಂತಿ ಪಡೆಯಬಯಸುವವರಿಗೆ ಊಟಿ ಜನಪ್ರಿಯ ಸ್ಥಳವಾಗಿರುತ್ತದೆ. ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಊಟಿ ಪ್ರದೇಶವು ಸುಂದರವಾದ ಸರೋವರ, ಜಲಪಾತ, ವಿಶಾಲವಾದ ಸಸ್ಯ ಉದ್ಯಾನವನ, ಅಚ್ಚಹಸಿರಿನ ಅರಣ್ಯ ಹಾಗೂ ಕಣಿವೆಗಳನ್ನು ಒಳಗೊಂಡಿದೆ.
ಹೋಟೆಲ್ ಮಯೂರ ಸುದರ್ಶನ ಊಟಿ ಘಟಕವು ಸುಂದರವಾದ ಹಸಿರು ಪರಿಸರ ಹೊಂದಿದ ಫರ್ನ್ ಬೆಟ್ಟದಲ್ಲಿದ್ದು, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುತ್ತದೆ. ಹೋಟೆಲ್‍ನಲ್ಲಿ ಒಟ್ಟು 03 ಮರದ ಕುಟೀರಗಳು, 02 ಹವಾನಿಯಂತ್ರಿತವಲ್ಲದ ಕೊಠಡಿಗಳು ಹಾಗೂ 20 ಹವಾನಿಯಂತ್ರಿತವಲ್ಲದ ಡಿಲೆಕ್ಸ್ ಬೆಡ್ ರೂಮ್‍ಗಳ ಇರುತ್ತವೆ.
ಅಲ್ಲದೇ, ಉತ್ತಮ ರೆಸ್ಟೋರೆಂಟ್ ಸೌಲಭ್ಯವಿದ್ದು, ಊಟಿ ಶೈಲಿಯ ಪಾಕಪದ್ಧತಿ ಹೊಂದಿರುತ್ತದೆ.
ಮುಂದಿನ ಬಾರಿ ಪ್ರವಾಸ ಕೈಗೊಳ್ಳುವ ಮನಸ್ಸಾದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.
ಈ ಸ್ಥಳದಲ್ಲಿ ಸಮಯವು ಇಲ್ಲೇ ನಿಲ್ಲಬೇಕೆಂದು ಭಾಸವಾಗುದಲ್ಲದೇ ನಾವು ಈ ಸ್ಥಳಕ್ಕೆ ಸಂಬಂಧಪಟ್ಟವರು ಎಂಬ ಭಾವನೆ ಬರುವುದು. ಅರಮನೆ ನಗರವಾದ ಮೆಜೆಸ್ಟಿಕ್ ಮೈಸೂರು ನಿರೀಕ್ಷೆಗಿಂತ ಹೆಚ್ಚಿನ ಆಕರ್ಷಣೆ ಹೊಂದಿದೆ.
ಭಾರತದ ಇತಿಹಾಸದಲ್ಲೇ ಅತೀ ಹೆಚ್ಚು ಕಾಳ ಆಳ್ವಿಕೆ ನಡೆಸಿದ ರಾಜವಂಶಗಳಲ್ಲಿ ಒಂದಾದ ‘ಒಡೆಯರು’ ಅರಮನೆಗಳ ನಗರ ಎಂದು ಖ್ಯಾತಿ ಪಡೆದ ಈ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು.
ಇದಲ್ಲದೇ, ಅಂಬಾ ವಿಲಾಸ್ ಅಥವಾ ಮೈಸೂರು ಅರಮನೆ ವಸ್ತು ಸಂಗ್ರಹಾಲಯ, ಹೋಟೆಲ್ ಇನ್ನಿತರೆ ಅನೇಕ ವಿಷಯಗಳಿಗೆ ಜನಪ್ರಿಯವಾಗಿರುತ್ತದೆ.
ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ನಡೆಯುವ ದಸರಾ ಮೆರವಣಿಗೆಯು ಭವ್ಯತೆಗೆ ಹೆಸರುವಾಸಿಯಾಗಿದೆ. ನಗರವು ವಿಶಾಲವಾದ ಮೃಗಾಲಯ ಹೊಂದಿದ್ದು, ಸದರಿ ಮೃಗಾಲಯವನ್ನು ರಾಯಕ್ ಪ್ರೋತ್ಸಾಹದಡಿಯಲ್ಲಿ ಪ್ರಾರಂಭಿಸಲಾಗಿದೆ ಮತ್ತು ಗೋಥಿಕ್ ಶೈಲಿಯಲ್ಲಿ ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್ ನಿರ್ಮಿಸಲಾಗಿದೆ.
ಹೋಟೆಲ್ ಮಯೂರ ಹೊಯ್ಸಳವು ಮೈಸೂರಿನ ಮಧ್ಯಬಾಗದಲ್ಲಿದ್ದು, ರೈಲು ನಿಲ್ದಾಣದ ಹತ್ತಿರದಲ್ಲಿರುವುದರಿಂದ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಅಲ್ಲದೆ ಸದರಿ ಹೋಟೆಲ್ ಪಾರಂಪಾರಿಕವಾದ ಕಟ್ಟಡದಲ್ಲಿ 13 ಹವಾನಿಯಂತ್ರಿತ ಡಬಲ್ ಬೆಡ್‍ರೂಮ್ ಮತ್ತು 18 ಉತ್ತಮ ಡಬಲ್ ಬೆಡ್ರೂಮ್ಗಳ ಸುಂದರವಾದ ವಸತಿ ಸೌಕರ್ಯ ಹೊಂದಿದೆ.
ನಿಮ್ಮ ಮುಂದಿನ ದೀರ್ಘ ಕಾಲದ ವಾರಾಂತ್ಯದಲ್ಲಿ ವಾಸ್ತುಶಿಲ್ಪದ ಅದ್ಭುತ ಕೆತ್ತನೆಗಳಿಗೆ ಸಾಕ್ಷಿಯಾಗಿರುವ ಹಳೆಬೀಡು ಪ್ರದೇಶಕ್ಕೆ ಭೇಟಿ ನೀಡುವ ಕುರಿತಾಗಿರಲಿ. ಇದು ಹೊಯ್ಸಳ ವಂಶದ ಮೊತ್ತೊಂದು ರಾಜಧಾನಿಯಾಗಿದ್ದು, ಈ ಪ್ರವಾಸಿ ತಾಣದಲ್ಲಿರುವ ಭವ್ಯವಾದ ಹೊಯ್ಸಳೇಶ್ವರ ದೇವಸ್ಥಾನವು ವಿಶ್ವದಾದ್ಯಂತ ಇರುವ ಪ್ರೇಕ್ಷಕರನ್ನು ಆಕರ್ಷಿಸುವ ಕೇಂದ್ರ ಬಿಂದುವಾಗಿದೆ. ಈ ದೇವಾಲಯವು ಶಿವನಿಗೆ ಅರ್ಪಿತವಾಗಿದೆ ಮತ್ತು ಸುತ್ತಲು ಕೊಳಗಳು, ಸರೋವರಗಳು ಮತ್ತು ಮಂಟಪಗಳನ್ನು ಹೊಂದಿದೆ. ದೇವಾಲಯದ ಗೋಡೆಯ ಮೇಲಿನ ಸಾವಿರ ಆಕೃತಿಗಳ ಕೆತ್ತನೆಗಳು ರಾಮಾಯಣ ಮತ್ತು ಮಹಾಭಾರತದ ಕಥೆಗಳಿಗೆ ಸಂಬಂಧಿಸಿದ್ದಾಗಿದೆ. ಪುರಾತತ್ತ್ವ ಶಾಸ್ತ್ರದ ಇಲಾಖೆಯ ವಸ್ತು ಸಂಗ್ರಹಾಲಯವು ಹೋಟೆಲ್‍ನ ಸಂಕೀರ್ಣದೊಳಗಿದೆ ಹಾಗೂ ಪಾಶ್ವನಾಥ ಬಸದಿ ಹೊಳಪು ಕಂಬಗಳು ಹೋಟೆಲ್‍ನ ಸಮೀಪದಲ್ಲಿದೆ.
ಹೋಟೆಲ್ ಮಯೂರ ಶಾಂತಲಾ ಹಳೇಬೀಡು ಘಟಕವು ದೇವಾಲಯದ ಪಕ್ಕದಲ್ಲಿಯೇ ಇದ್ದು, ಹಿಂದೂ ವಾಸ್ತುಶಿಲ್ಪದ ಸೌಂದರ್ಯವನ್ನು ಸವಿಯಲು ಬಯಸುವವರಿಗೆ ಇದು ಸೂಕ್ತವಾದ ಪ್ರದೇಶವಾಗಿದೆ. ಈ ಹೋಟೆಲ್ ಘಟಕವು 03 ಎಸಿ ಡಬಲ್ ಬೆಡ್ ರೂಮ್ ಮತ್ತು 1 ನಾಲ್ಕು ಬೆಡ್ ರೂಮ್‍ನನ್ನು ಹೊಂದಿರುವುದರೊಂದಿಗೆ ಕರ್ನಾಟಕದ ಸವಿಯಾದ ತಿನಿಸುಗಳನ್ನು ಒಂದೇ ಸೂರಿನಡಿ ಒದಗಿಸುವ ರೆಸ್ಟೋರೆಂಟ್‍ನ್ನು ಹೊಂದಿರುತ್ತದೆ.
ಪ್ರಕೃತಿಯ ನೈಜ್ಯ ಸೌಂದರ್ಯತೆಯ ಅನುಭವ ಪಡೆಯಲು, ಯಾವುದೇ ಹುಡುಕಾಟವಿಲ್ಲದೇ ಜೋಗ್‍ಫಾಲ್ಸ್ ಭೇಟಿ ನೀಡಬಹುದು. ಕಪ್ಪು ಬಂಡೆಯ ಮೇಲೆ ಬೀಳುವ ಸ್ಪಟಿಕದ ನೀರಿನ ಕುಸಿತವು ಕಿವಿಗೆ ಸಂಗೀತದಂತೆ ಭಾಸವಾಗುತ್ತದೆ.
ಇದರ ಸೌಂದರ್ಯವನ್ನು ಬೆರಗುಗೊಳಿಸುವ ಭವ್ಯತೆಯನ್ನು ಅನುಭವಿಸಲು ಮಾತ್ರ ಸಾಧ್ಯವಿದ್ದು, ಊಹಿಸಲು ಅಥವಾ ಚಿತ್ರಗಳಲ್ಲಿ ತೋರಿಸಲು ಸಾಧ್ಯವಿರುವುದಿಲ್ಲ.
ಗೇರುಸೊಪ್ಪ ಎಂದು ಕರೆಯಲ್ಪಡುವ ಜೋಗ್ ಫಾಲ್ಸ್ ಭಾರತ ದೇಶದ ಎರಡನೇ ಅತ್ಯಂತ ಎತ್ತರದ ಜಲಪಾತವಾಗಿದೆ. ವಿಶ್ವದ ಅತ್ಯುತ್ತಮ ಶ್ರೇಯಾಂಕಿತ, ಅದ್ಬುತ ಜಲಪಾತವಾಗಿದ್ದು, ಶರಾವತಿ ನದಿಯು 829 ಅಡಿ ಎತ್ತರದಿಂದ ದುಮ್ಮಿಕ್ಕುವುದನ್ನು ನೋಡಬಹುದು. ನಾಲ್ಕು ವಿಶಿಷ್ಟ ಕಿರು ಜಲಪಾತಗಳಾದ ರಾಜ, ರಾಣಿ, ರೋರರ್ ರಾಕೇಟ್ ಜಲಪಾತಗಳು ಸೂರ್ಯನ ಕಿರಣಗಳಿಂದ ರೂಪುಗೊಳ್ಳುವ ಮಳೆಬಿಲ್ಲನ್ನು ಜಲಪಾತದಿಂದ ರಚಿಸಿದಂತೆ ಕಾಣುತ್ತದೆ.
ಹೋಟೆಲ್ ಮಯೂರ ಗೇರುಸೊಪ್ಪ, ಜೋಗ್ ಫಾಲ್ಸ್ ಜೋಗ್ ಫಾಲ್ಸ್‍ನ ಒಂದು ಅದ್ಭುತ ನೋಟವನ್ನು ನೀಡುತ್ತದೆ. ಸದರಿ ಹೋಟೆಲ್ 11 ಕೊಠಡಿಗಳನ್ನೊಳಗೊಂಡಿದ್ದು, ಅದರಲ್ಲಿ 06 ಹವಾ ನಿಯಂತ್ರಿತ ಕೊಠಡಿಗಳು, 04 ಉತ್ತಮ ಡಬಲ್ ಬೆಡ್ ಕೊಠಡಿಗಳು ಹಾಗೂ 01 ಹತ್ತು ಬೆಡ್ ಉಳ್ಳ ವಸತಿ ನಿಲಯವನ್ನು ಹೊಂದಿದೆ. ಅಲ್ಲದೇ, ಉತ್ತಮ ರೆಸ್ಟೋರೆಂಟ್ ಹೊಂದಿದ್ದು, ತನ್ನ ಪ್ರವಾಸಿಗರಿಗಾಗಿ ಸ್ಥಳವೀಕ್ಷಣೆ ಪ್ರವಾಸಗಳನ್ನು ಆಯೋಜಿಸುತ್ತದೆ.
ಕಣಿವೆಯಿಂದ ನೀರು ಮುತ್ತುಗಳಂತೆ ಬಂಡೆಗಳ ಮೇಲೆ ಬಿದ್ದು ಸಂಗೀತದಂತೆ ಪ್ರತಿಧ್ವನಿಸುವ ಕಲ್ಪನೆಯೇ ಅದ್ಭುತವಾಗಿದೆ. ಈ ಕಲ್ಪನೆಗೆ ಜೀವಂತಿಕೆ ನೀಡಲು ಹಾಗೂ ಈ ಸುಂದರವಾದ ಅನುಭವವನ್ನು ಪಡೆಯಲು ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿ ಆನೇಕಲ್ ಬಳಿ ಇರುವ ಮುತ್ಯಾಲಮಡುವು ಸ್ಥಳಕ್ಕೆ ಆಗಮಿಸಿ.
ಹೋಟೆಲ್ ಮಯೂರ ನಿಸರ್ಗ ಪರ್ಲ್ ವ್ಯಾಲಿ ಘಟಕವು ಮುತ್ಯಾಲಮಡುವಿಗೆ ಅತೀ ಸಮೀಪದಲ್ಲಿದ್ದು, ಆನೇಕಲ್ ನಿಂದ 5 ಕಿ.ಮೀ ದೂರದಲ್ಲಿದೆ. ಸದರಿ ಹೋಟೆಲ್ ಘಟಕವು 05 ಬೆಡ್‍ರೂಮ್ ಗಳನ್ನು ಮತ್ತು ರೆಸ್ಟೋರೆಂಟ್‍ನ್ನು ಹೊಂದಿದ್ದು, ಇಲ್ಲಿಗೆ ಆಗಮಿಸುವ ಅತಿಥಿಗಳಿಗೆ ಮನೆಯಲ್ಲಿ ಇರುವಂತೆ ಬಾಸವಾಗುತ್ತದೆ.
ನಿಮಗೆ ಅಣೆಕಟ್ಟಿನ ಕುರಿತಂತೆ ಯಾವುದಾದರೂ ದೃಷ್ಠಿಕೊನವಿದ್ದಲ್ಲಿ, ಈ ದೃಷ್ಠಿಕೋನವನನು ಪರಾಮರ್ಷಿಸಲು ಅತ್ಯಂತ ಸುಂದರ ತಾಣವಾದ ತುಂಗಭದ್ರ ಅಣೆಕಟ್ಟಿಗೆ ಭೇಟಿ ನೀಡಬಹುದಾಗಿದೆ. ಈ ಅಣೆಕಟ್ಟು ಪ್ರದೇಶವು ಹೊಸಪೇಟೆಗೆ ಅತ್ಯಂತ ಸಮೀಪವಿದ್ದು, ಇದು ಹಂಪಿಯ ವಿಶ್ವ ಪರಂಪರೆಯ ತಾಣವನ್ನು ಹೋಲುವ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ.
ಹೋಟೆಲ್ ಮಯೂರ ವಿಜಯನಗರ ಘಟಕವು ಅಣೆಕಟ್ಟಿನ ಪಕ್ಕದಲ್ಲಿದೇ ಇದ್ದು, ಅಲ್ಲಿಗೆ ಆಗಮಿಸುವ ಪ್ರಯಾಣಿಕರಿಗೆ ಹಸಿರು ಮತ್ತು ಪ್ರಶಾಂತತೆಯ ವಾತಾವರಣವನ್ನು ನೀಡುತ್ತದೆ. ಈ ಹೋಟೆಲ್ ಘಟಕವು ಒಟ್ಟು 20 ಕೊಠಡಿಗಳನ್ನು ಹೊಂದಿದ್ದು, ಅವುಗಳಲ್ಲಿ 13 ಡಬಲ್ ಬೆಡ್ ರೂಮ್ ಮತ್ತು 7 ಹವಾ ನಿಯಂತ್ರಿತ ಬೆಡ್ ರೂಮ್‍ಗಳಾಗಿರುತ್ತದೆ. ಇದು ರೆಸ್ಟೋರೆಂಟ್ ಮತ್ತು ಬೀಯರ್ ಪಾರ್ಲರ್‍ನ್ನು ಹೊಂದಿದ್ದು, ಪ್ರವಾಸಿಗರಿಗೆ ವಾಸ್ತವ್ಯದ ಪರಿಪೂರ್ಣ ಅನುಭವವನ್ನು ನೀಡುತ್ತದೆ.
ಭಾಗಮಂಡಲವು ಕೇವಲ ಗಿರಿದಾಮವಲ್ಲದೇ, ಸ್ವರ್ಗದಂತಿರುವ ತಾಣವಾಗಿದ್ದು, ಭಕ್ತಿ ಮತ್ತು ಶಾಂತಿಯ ಹುಡುಕಾಟದಲ್ಲಿರುವ ಜನರಿಗೆ ಇದು ಸೂಕ್ತವಾದ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಎರಡು ನದಿಗಳ ಸಂಗಮವಾಗಲಿದ್ದು, ಮೂರನೇಯ ಜಲಾಂತರ್ಗಾಮಿ ಕೂಡಾ ಸೇರಿಕೊಳ್ಳುತ್ತದೆ. ನದಿಯ ದಂಡೆಯಲ್ಲಿ ಹಿಂದೂ ಧರ್ಮದ ತ್ರಿಮೂರ್ತಿಗಳಿಗೆ ಮೀಸಲಾಗಿರುವ ದೇವಾಲಯಗಳಿದ್ದು, ಶಿವನನ್ನು ಭಗಂಡೇಶ್ವರ, ಬ್ರಹ್ಮ ಮತ್ತು ಮಾಹಾವಿಷ್ಟು ಎಂದು ಪೂಜಿಸಲಾಗುತ್ತದೆ. ಕಾವೇರಿ ನದಿಯ ಮೂಲವಾದ ತಲಕಾವೇರಿ 7 ಕಿ.ಮೀ ದೂರದಲ್ಲಿದೆ.
ಹೋಟೆಲ್ ಮಯೂರ ತಲಕಾವೇರಿ ಘಟಕವು ಬೆಟ್ಟದ ಇಳಿಜಾರಿನಲ್ಲಿದೆ ಮತ್ತು ಮೋಡಿ ಮಾಡುವ ಕೂರ್ಗ್ ಭೂದೃಶ್ಯದ ಪಕ್ಷಿಗಳ ನೋಟವನ್ನು ನೀಡುತ್ತದೆ. ಸದರಿ ಹೋಟೆಲ್ ಘಟಕವು 18 ಡಬಲ್ ರೂಮ್‍ಗಳು ಮತ್ತು ಸಸ್ಯಾಹಾರಿ ರೆಸ್ಟೋರೆಂಟ್ ಹೊಂದಿರುವ ಆಕರ್ಷಕ ಕೇಂದ್ರವಾಗಿದೆ.
ಸುಂದರವಾದ ಶಿವನಸಮುದ್ರ ಜಲಪಾತವು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿದೆ. ಶಿವನಸಮುದ್ರ ಎಂದರೆ ಭಗವಾನ್ ಶಿವನ ಸಮುದ್ರ ಎಂಬುದಾಗಿದೆ. ಇದು ವಿಭಜಿತ ಜಲಪಾತವಾಗಿದ್ದು, ಒಂದಕ್ಕಿಂತ ಹೆಚ್ಚಿನ ಬದಿಗಳನ್ನು ಹೊಂದಿರುತ್ತದೆ. ಪಶ್ಚಿಮ ಶಾಖೆಯಲ್ಲಿ ಗಗನಚುಕ್ಕಿ ಜಲಪಾತವು ಮತ್ತು ಪೂರ್ವ ಶಾಖೆಯಲ್ಲಿ ಭರಚುಕ್ಕಿ ಜಲಪಾತಗಳಿದ್ದು, ಈ ಎರಡು ಜಲಪಾತಗಳನ್ನು ಅವಳಿ ಜಲಪಾತಗಳು ಎಂದು ಕರೆಯಲಾಗುತ್ತದೆ.
ಹೋಟೆಲ್ ಮಯೂರ ಭರಚುಕ್ಕಿ ಘಟಕವು ಶಿವನಸಮುದ್ರ ಜಲಪಾತದ ಸಮೀಪವಿದ್ದು, ಇದು ಪ್ರವಾಸಿಗರಿಗೆ ಪ್ರಕೃತಿಯ ಸೌಂದರ್ಯವನ್ನು ಹತ್ತಿರದಿಂದ ಸವಿಯಲು ಅವಕಾಶ ಕಲ್ಪಿಸುತ್ತದೆ. ಈ ಹೋಟೆಲ್ ಘಟಕವು 04 ಹವಾ ನಿಯಂತ್ರಿತ ಡಬಲ್ ಬೆಡ್ ರೂಮ್‍ಗಳನ್ನು ಒಳಗೊಂಡಿದ್ದು, ನಗರ ಪ್ರದೇಶದಿಂದ ಹೊರ ಬಂದು ಪ್ರಕೃತಿ ವಾತಾವರಣದಲ್ಲಿ ಸ್ವಲ್ಪ ಸಮಯ ಕಳೆಯಲು ಅವಕಾಶವನ್ನು ಒದಗಿಸುತ್ತದೆ.
ಹೆಚ್ಚಿನ ಒತ್ತಡದಲ್ಲಿರುವವರು ವಿಶ್ರಾಂತಿಯನ್ನು ಪಡೆಯಲು ಹೊಸ ಜಾಗಕ್ಕೆ ತೆರಳಲು ಇಚ್ಛಿಸಿದರೆ, ಬೇಲೂರಿಗೆ ಪ್ರಯಾಣಿಸಬಹುದಾಗಿದೆ. ಏಕೆಂದರೆ, ಬೇಲೂರು ಉತ್ತಮವಾದ ಪ್ರಕೃತಿಕ ಸೌಂದರ್ಯವನ್ನು ಹೊಂದಿದೆ ಹಾಗೂ ಹೊಯ್ಸಳ ರಾಜವಂಶದ ರಾಜಧಾನಿಗಳಲ್ಲಿ ಒಂದಾದ ಬೇಲೂರು ಭವ್ಯವಾದ ಹೊಯ್ಸಳ ದೇವಾಲಯದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಬೇಲೂರಿನ ದೇವಾಲಯಗಳು ಅದರ ಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಚನ್ನಕೇಶವ ದೇವಸ್ಥಾನವು ಹೊಯ್ಸಳ ರಾಜ ವಿಷ್ಣುವರ್ಧನ ಕಾಲದಲ್ಲಿ ನಿರ್ಮಾಣಗೊಂಡಿರುತ್ತದೆ. ವೀರನಾರಾಯಣ ದೇವಸ್ಥಾನ, ಶ್ರೀದೇವಿ ದೇವಸ್ಥಾನ ಹಾಗೂ ಭೂದೇವಿ ದೇವಸ್ಥಾನಗಳು ದಕ್ಷಿಣ ಭಾರತದ ಭವ್ಯತೆಯ ಕಥೆಗಳನ್ನು ವಿವರಿಸುತ್ತದೆ.
ಹೋಟೆಲ್ ಮಯೂರ ವೇಲಾಪುರಿ ಬೇಲೂರು ಘಟಕಕ್ಕೆ ದೇವಾಲಯದ ಸಂಕೀರ್ಣದಿಂದ ಕಾಲುದಾರಿಯಲ್ಲಿ 05 ನಿಮಿಷದಲ್ಲಿ ತೆರಳಬಹುದಾಗಿದೆ ಮತ್ತು ದೇವಾಲಯಗಳ ಸೌಂದರ್ಯವನ್ನು ಆರಾಧಿಸುವವರಿಗೆ ಹೆಚ್ಚು ಸಮಯ ಕಳೆಯಲು ಬಯಸುವವರಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಹೋಟೆಲ್ ಘಟಕವು 14 ಹವಾ ನಿಯತ್ರಿತ ಕೊಠಡಿ ಮತ್ತು ಹವಾ ರಹಿತ ಕೊಠಡಿಗಳನ್ನು ಹಾಗೂ 02 ವಸತಿ ನಿಲಯಗಳನ್ನು ಹೊಂದಿರುವುದರೊಂದಿಗೆ, ರೆಸ್ಟೋರೆಂಟ್ ಮತ್ತು ಬಾರ್‍ನ್ನು ಹೊಂದಿರುತ್ತದೆ.
ನೀವು ಬೆಂಗಳೂರಿನವರಾಗಿದ್ದರೆ ಖಂಡಿತವಾಗಿ ಕನಕಪುಕ್ಕೆ ಭೇಟಿ ನೀಡುತ್ತೀರಿ. ಅಲ್ಲಿಂದ, ಅರ್ಕಾವತಿ ಕಾವೇರಿಯೊಂದಿಗೆ ವಿಲೀನಗೊಳ್ಳುವ ಸ್ಥಳವಾದ ಸಂಗಮ ಮತ್ತು ಮೇಕೆದಾಟುವಿಗೆ ಪ್ರವಾಸ ಕೈಗೊಳ್ಳಿ. ಈ ಸ್ಥಳಕ್ಕೆ ಒಂದು ಪೌರಾಣಿಕ ಕಥೆಯಿದೆ– ಕಾವೇರಿ ನದಿಯಿಂದ ಹಾರಿ ಹೋಗಿದೆ ಎಂದು ನಂಬಲಾದ ಮೇಕೆ, ಶಿವನ ವೇಷದಲ್ಲಿತ್ತು.
ಹೋಟೆಲ್ ಮಯೂರ ಸಂಗಮ ಘಟಕವು ಮೇಕೆದಾಟುವಿಗೆ ಸಮೀಪದಲ್ಲಿದೆ. ಈ ಹೋಟೆಲ್ ಘಟಕವು ವಿವಿಧ ರೀತಿಯ ವಸತಿ ವ್ಯವಸ್ಥೆಯನ್ನು ಒದಗಿಸಲಿದ್ದು, 10 ಹವಾ ನಿಯಂತ್ರಿತ ಕೊಠಡಿಗಳು, 04 ಡಬಲ್ ಬೆಡ್ ರೂಮ್ ಮತ್ತು 14 ಹಾಸಿಗೆಗಳನ್ನು ಹೊಂದಿರುವ 01 ವಸತಿ ನಿಲಯವನ್ನು ಹೊಂದಿದೆ.
ಶೌರ್ಯ, ಘನತೆ ಮತ್ತು ಅಶ್ವದಳದ ಭೂಮಿ ಚಿತ್ರದುರ್ಗ ಒಂದು ಅದ್ಭುತವಾದ ಪ್ರದೇಶ. ಇದು ಡೆಕ್ಕನ್ ಪ್ರಸ್ಥಭೂಮಿಯ ಹೃದಯ ಭಾಗದಲ್ಲಿರುವ ಬೆಂಗಳೂರಿನ ವಾಯುವ್ಯಕ್ಕೆ 202 ಕಿ.ಮೀ ದೂರದಲ್ಲಿದೆ. ಚಿತ್ರದುರ್ಗವು ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಅಸ್ಥಿತ್ವದಲ್ಲಿದೆ ಎಂದು ಹೇಳಲಾಗುತ್ತದೆ. ತುಂಗಾಭದ್ರ ನದಿಯು ವಾಯುವ್ಯದಲ್ಲಿ ಹರಿಯುವುದರೊಂದಿಗೆ ಈ ಜಿಲ್ಲೆಯು ವೇದಾವತಿ ನದಿಯ ಕಣಿವೆಯಲ್ಲಿ ನೆಲೆಸಿದೆ.
ಹೋಟೆಲ್ ಮಯೂರ ದುರ್ಗ ಘಟಕವು ಚಿತ್ರದುರ್ಗ ಕೋಟೆಯ ಸಮೀಪದಲ್ಲಿದೆ. ಈ ಹೋಟೆಲ್ ಘಟಕವು ಪ್ರವಾಸಿಗರಿಗೆ ವಿವಿಧ ರೀತಿಯ ವಸತಿ ಸೌಲಭ್ಯವನ್ನು ಒದಗಿಸುತ್ತದೆ-08 ಹವಾ ನಿಯಂತ್ರಿತ ಕೊಠಡಿಗಳು, 8 ಹಾಸಿಗೆಯುಳ್ಳ 04 ವಸತಿ ನಿಲಯಗಳನ್ನು ಹೊಂದಿರುವುದಲ್ಲದೇ, ವಿಶೇಷ ದಿನಗಳನ್ನು ಆಚರಿಸಲು ಕಾನ್ಫರೆನ್ಸ್ ಹಾಲ್ ಮತ್ತು ಸಭಾಂಗಣವನ್ನು ಹೊಂದಿರುತ್ತದೆ.
ಮುಂದೆ ನೀವು ಆಶ್ಚರ್ಯ ಪಡುವ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಇಚ್ಛಿಸುವೀರಾ? ಹಾಗಾದರೆ ನೀವು ಉತ್ತರ ಕರ್ನಾಟಕದಲ್ಲಿ ಗುಹೆಗಳಿಂದ ಕೂಡಿರುವ ಬಾದಾಮಿ ಪ್ರದೇಶಕ್ಕೆ ಭೇಟಿ ನೀಡಬಹುದಾಗಿದೆ. ಈ ಪ್ರದೇಶವು ತುಕ್ಕು–ಕೆಂಪು ಬಂಡೆಯ ಮುಖದಿಂದ ಕೆತ್ತಿದ ಶಿಲಾ ದೇವಾಲಯಗಳ ನೆಲೆಯಾಗಿದೆ. ಈ ಸ್ಮಾರಕಗಳನ್ನು ರಚಿಸಲು ಶ್ರಮಿಸಿದ ಚಾಲುಕ್ಯ ಶಿಲ್ಪಿಗಳ ಅಸಾಧಾರಣ ಕಲಾತ್ಮಕತೆಯೇ ಈ ದೇವಾಲಯಗಳಿಗೆ ಸಾಕ್ಷಿಯಾಗಿದೆ. ಬಾದಾಮಿ ಭಾರತದ ವೈಭವಯುತವಾದ ಭೂತಕಾಲವಾಗಿದ್ದು, 18 ಶಸ್ತ್ರ ಸಜ್ಜಿತ ನಟರಾಜರ 81 ನೃತ್ಯ ಭಂಗಿಗಳನ್ನು, ವಿಷ್ಣುವಿಗೆ ಅರ್ಪಿತವಾದ ದೇವಾಲಯಗಳ ಸುಂದರ ಶಿಲ್ಪಗಳನ್ನು ಹೊಂದಿದೆ.
ಹೋಟೆಲ್ ಮಯೂರ ಚಾಲುಕ್ಯ ಬಾದಾಮಿ ಘಟಕವು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದ್ದು, ಎರಡು ಬ್ಲಾಕ್‍ಗಳನ್ನು ಒಳಗೊಂಡಿರುತ್ತದೆ. ಒಂದು ಬ್ಲಾಕ್‍ನಲ್ಲಿ 10 ಡಬಲ್ ಬೆಡ್ ರೂಮ್‍ಗಳಿದ್ದು, ಅವುಗಳಲ್ಲಿ 6 ಹವಾನಿಯಂತ್ರಿತ ಡಿಲಕ್ಸ್ ಕೊಠಡಿಗಳು ಮತ್ತು 10 ಹವಾನಿಯಂತ್ರಿತ ಸೆಮಿ ಡಿಲಕ್ಸ್ ಕೊಠಡಿಗಳು ಮತ್ತು ಇನ್ನೊಂದು ಬ್ಲಾಕ್‍ನಲ್ಲಿ 10 ಹವಾ ರಹಿತ ಕೊಠಡಿಗಳಿದ್ದು, ಅವುಗಳಲ್ಲಿ 04 ಡಬಲ್ ಬೆಡ್ ರೂಮ್‍ಗಳು ಮತ್ತು 02 ಮೂರು ಬೆಡ್‍ಗಳ ರೂಮ್‍ಗಳನ್ನು ಒಳಗೊಂಡಿರುತ್ತದೆ. ಹೋಟೆಲ್ ರೆಸ್ಟೋರೆಂಟ್ ಮತ್ತು ಬೀರ್ ಪಾರ್ಲರ್‍ಗಳ ವ್ಯವಸ್ಥೆಯನ್ನು ಸಹಾ ಹೊಂದಿರುತ್ತದೆ.
ಬೃಂದಾವನ ಉದ್ಯಾನವನವು ದೇಶದ ಸುಂದರವಾದ ಉದ್ಯಾನವಗಳಲ್ಲಿ ಒಂದಾಗಿದೆ ಹಾಗೂ ಹೆಚ್ಚಿನ ಪ್ರವಾಸಿಗರಿಂದ ಆಕರ್ಷಿಸಲ್ಪಟ್ಟ ಸ್ಥಳವಾಗಿರುತ್ತದೆ. ಸದರಿ ಉದ್ಯಾನವವು ದೇಶಿ ವಿದೇಶಿ ಹೂವುಗಳಿಂದ ಹಾಗೂ ಅಲಂಕಾರಿಕ ಮರಗಳಿಂದ ಪ್ರಾರಂಭಗೊಂಡು ಉತ್ತಮ ಅನುಭವದೊಂದಿಗೆ ಕೊನೆಗೊಳ್ಳುತ್ತದೆ.
ಉದ್ಯಾನವವು ಅಂದವಾದ ಹುಲ್ಲುಹಾಸಿಗೆ ಹಾಗೂ ಹೂವುಗಳು ಮತ್ತು ಸೊಗಸಾದ ಸಸ್ಯಾಲಂಕಾರಗಳ ಸ್ವರಮೇಳವಾಗಿದ್ದು, ಮಧ್ಯದಲ್ಲಿ ನೀರು ಹರಿಯುತ್ತಿರುತ್ತದೆ.
ಉದ್ಯಾನವದಲ್ಲಿ ಮನಸ್ಸಿಗೆ ಮುದ ನೀಡುವ ಕಾರಂಜಿ ಪ್ರದರ್ಶನವಿದ್ದಾಗ ಉದ್ಯಾನವನವು ನೋಡಲು ಕಾಲ್ಪನಿಕ ಸುಂದರವಾದ ತಾಣದಂತೆ ಗೋಚರಿಸುತ್ತದೆ. ಇಂತಹ ಸಂದರ್ಭವು ಉದ್ಯಾನವನಕ್ಕೆ ಬೇಟಿ ನೀಡಲು ಉತ್ತಮವಾಗಿರುತ್ತದೆ.
ಹೋಟೆಲ್ ಮಯೂರ ಕಾವೇರಿ ಕೆ.ಆರ್ ಸಾಗರವು ವಿವಿಧ ದಿನಗಳಲ್ಲಿ ವರ್ಣರಂಜಿತ ಉದ್ಯಾನವನದ ಆಕರ್ಷಣೆಯ ಅನುಭವ ನೀಡುವ ತಾಣವಾಗಿದೆ. ಸದರಿ ಹೋಟೆಲ್ 20 ಕೊಠಡಿಗಳು ಹಾಗೂ 05 ಹವಾ ನಿಯಂತ್ರಿತ ಡಬಲ್ ಬೆಡ್ ಕೊಠಡಿಗಳೊಂದಿಗೆ 15 ಉತ್ತಮ ಡಬಲ್ ಬೆಡ್ ಕೊಠಡಿಗಳನ್ನು ಒಳಗೊಂಡಿದೆ. ಅಲ್ಲದೇ, ಅತಿಥಿಗಳಿಗಾಗಿ ರೆಸ್ಟೋರೆಂಟ್ ಹಾಗೂ ಬಾರ್ ಸೌಲಭ್ಯವನ್ನು ಹೊಂದಿದೆ.
ನಿರ್ವಹಣೆಗಾಗಿ ಪಡೆದ ಕೆ.ಎಸ್.ಟಿ.ಡಿ.ಸಿ ಯ ಆಸ್ತಿಗಳಲ್ಲಿ ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ಕರಾವಳಿ ಪ್ರದೇಶದಲ್ಲಿಯೇ ಉತ್ತಮವಾದ ರೆಸಾರ್ಟ್ ಆಗಿದ್ದು, ತಂಗಲು ಉತ್ತಮ ಸ್ಥಳವಾಗಿದೆ.
ನೀವು ಬೀಚ್ ಪ್ರೇಮಿಯಾಗಿದ್ದಲ್ಲಿ, ಈ ಪ್ರದೇಶವನ್ನು ವೀಕ್ಷಿಸಿದಲ್ಲಿ ತುಂಬಾ ಸಂಭ್ರಮಿಸುತ್ತೀರಿ. ನೀವು ನೀಲಿ ಬಣ್ಣದಲ್ಲಿ ಹೊಳೆಯುವ ಅರೇಬಿಯನ್ ಸಮುದ್ರಕ್ಕೆ ಹತ್ತಿರವಾಗುತ್ತಿದ್ದಂತೆ, ನಿಮಗೆ ಬೇರೆ ಜಗತ್ತನ್ನು ಪ್ರವೇಶಿಸಿದ ಅನುಭವ ಉಂಟಾಗಲಿದ್ದು, ಈ ಅದ್ಭುತ ಸೌಂದರ್ಯದ ಜಗತ್ತಿಗೆ ಅಂತ್ಯವಿರುವುದಿಲ್ಲ.
ಕರ್ನಾಟಕದ ಕರಾವಳಿ ಪಟ್ಟಣವಾದ ಮಲ್ಪೆ ಅದ್ಭುತ ಭೂ ದೃಶ್ಯಗಳು ಮತ್ತು ಅರೇಬಿಯನ್ ಸಮುದ್ರದ ಕರಾವಳಿಯ ನೈಸರ್ಗಿಕ ಅನುಭವವನ್ನು ಹೊಂದಿರುವ ಸ್ಥಳವಾಗಿದೆ. ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ನಿಮಗೆ ಸ್ವರ್ಗದ ಅನುಭವವನ್ನು ನೀಡುತ್ತದೆ. ಮಲ್ಪೆ ಬೀಚ್‍ನಲ್ಲಿರುವ ಬಿಳಿ ಮರಳಿನ ಉದ್ದಕ್ಕೂ ನೆಲೆಗೊಂಡಿರುವ ಈ ರೆಸಾರ್ಟ್ ಸರಳತೆ ಮತ್ತು ಸೌಕರ್ಯಗಳಿಂದ ಕೂಡಿದ ಪ್ಯಾಕೇಜ್‍ನ್ನು ಹೊಂದಿದೆ.
ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ಸಂಪೂರ್ಣ ಹವಾ ನಿಯಂತ್ರಿತ ಕೊಠಡಿಗಳನ್ನು ಹೊಂದಿದ್ದು, ಈ ಕೊಠಡಿಯಿಂದಲೇ ಸಮುದ್ರದ ಸೊಗಸಾದ ನೋಟವನ್ನು ವೀಕ್ಷಿಸಬಹುದಾಗೊದೆ. ಇದು ಬಿಸಿ ಮತ್ತು ತಣ್ಣನೆಯ ಹರಿಯುವ ನೀರು, ಇಂಟರ್‍ಕಾಮ್‍ಗಳು, ಲಾಬಿಯಲ್ಲಿ ಉಚಿತ ವೈ-ಪೈ ಸಂಪರ್ಕವನ್ನು ಹೊಂದಿದೆ ಹಾಗೂ ಭಾರದಲ್ಲಿ ಉಚಿತ ವೈ-ಪೈ ಸಂಪರ್ಕವನ್ನು ನೀಡುತ್ತಿರುವ ಏಕೈಕ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಡಲತೀರದಲ್ಲಿರುವ ಆಸ್ತಿಯು 02 ರೆಸ್ಟೋರೆಂಟ್‍ಗಳಿಗೆ ಹೆಸರುವಾಸಿಯಾಗಿದೆ:
ಒಂದು ರೆಸ್ಟೋರೆಂಟ್‍ನಲ್ಲಿ ಸಮುದ್ರ ತೀರದ ವಿಶೇಷ ಆಹಾರಗಳನ್ನು ಸ್ಥಳೀಯ ಪಾಕ ಪದ್ದತಿಯಲ್ಲಿಯೇ ತಯಾರಿಸುವ ರೆಸ್ಟೋರೆಂಟ್ ಆಗಿದ್ದು, ಇಲ್ಲಿಂದ ಮಲ್ಪೆ ಬೀಚ್‍ನ ಮೇಲಿನ ಅದ್ಭುತ ನೋಟವನ್ನು ಸವಿಯಬಹುದಾಗಿದೆ.
ಇನ್ನೊಂದು ರೆಸ್ಟೋರೆಂಟ್‍ನಲ್ಲಿ ದಕ್ಷಿಣ ಕರ್ನಾಟಕ ಮತ್ತು ಇತರೆ ಜಾಗತಿಕ ಪಾಕ ಪದ್ದತಿಗಳಾದ ಮೊಘಲೈ, ಚೈನೀಸ್ ಮತ್ತು ಕಾಂಟಿನೆಂಟಲ್, ಸೀಶೇಲ್ಸ್ ಮಾದರಿಯ ಆಹಾರವನ್ನು ತಯಾರಿಸುವ ರೆಸ್ಟೋರೆಂಟ್ ಆಗಿದ್ದು, ಸ್ಥಳೀಯ ಭಕ್ಷಗಳ ರುಚಿಯನ್ನು ಸವಿಯಲು ಅನುವು ಮಾಡಿಕೊಡುತ್ತದೆ.
ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್‍ನಲ್ಲಿ ರಜಾ ದಿನಗಳನ್ನು ಪರಿಪೂರ್ಣವಾಗಿ ಕಳೆಯಲು ಬೋಜನ ಕೂಟದ ಹಾಲ್, ಕಾನ್ವೆಷನಲ್ ಹಾಲ್, ಡಿಸ್ಕೋಥೇಕ್, ನೀರಿಗೆ ಸಂಬಂಧಿಸಿದ ಆಟಗಳು ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುತ್ತದೆ.
ನಿಗಮದ ಆಸ್ತಿಯಾಗಿರುವ ಪ್ಯಾರಾಡೈಸ್ ವೈಲ್ಡ್ ಹಿಲ್ಸ್ ರೆಸಾರ್ಟ್‍ನ್ನು ನಿರ್ವಹಣೆ ಮಾಡಲು ಒಪ್ಪಂದದ ಆಧಾರದ ಮೇಲೆ ಗುತ್ತಿಗೆಗೆ ನೀಡಲಾಗಿರುತ್ತದೆ. ಈ ರೆಸಾರ್ಟ್ ಸೊಂಪಾದ ಮತ್ತು ರಮಣೀಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದ್ದು, ಕರ್ನಾಟಕ ಪ್ರಸಿದ್ಧ ದೇವಾಲಯಗಲ್ಲಿ ಒಂದಾದ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಾಸ್ಥಾನದಿಂದ ಕೇವಲ 20 ನಿಮಿಷಗಳ ದೂರದಲ್ಲಿದೆ. ಈ ಸ್ಥಳವು ಪ್ರಕೃತಿ ಪ್ರಿಯರು, ಟ್ರಕ್ಕಿಂಗ್ ಮಾಡಲು ಬಯಸುವವರಿಗೆ ಮತ್ತು ತೀರ್ಥಯಾತ್ರೆಯ ಪ್ರಯಾಣಿಕರಿಗೆ ವಿಶ್ರಮಿಸಲು ಉತ್ತಮ ಸ್ಥಳವಾಗಿದೆ.
ಪ್ಯಾರಾಡೈಸ್ ರೆಸಾರ್ಟ್ ಪಶ್ಚಿಮ ಘಟ್ಟದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಐಷಾರಾಮಿ ರೆಸಾರ್ಟ್ ಆಗಿದೆ. ಈ ರೆಸಾರ್ಟ್‍ಗೆ ಆಗಮಿಸುವ ಅತಿಥಿಗಳು ಕೊಡಚಾದ್ರಿ ಬೆಟ್ಟದ ಸೌಂದರ್ಯವನ್ನು ವೀಕ್ಷಿಸುವುದರೊಂದಿಗೆ, ಪ್ರಶಾಂತವಾದ ಪರಿಸರದ ಮಡಿಲಿನಲ್ಲಿ ಸಂಪೂರ್ಣ ತನ್ಮಯರಾಗಿ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಬಹುದಾಗಿದೆ. ಇಲ್ಲಿ ಬೀಸುವ ತಂಗಾಳಿ, ಹಕ್ಕಿಗಳ ಕಲರವ ಮತ್ತು ಹಸಿರಿನಿಂದ ಕೂಡಿದ ವಾತಾವರಣ ಅತಿಥಿಗಳಿಗೆ ಒಂದು ಹೊಸ ಅನುಭವವನ್ನು ನೀಡುವುದರೊಂದಿಗೆ ಮನಸ್ಸಿಗೆ ಹೊಸ ಹುರುಪನ್ನು ಮೂಡಿಸುತ್ತದೆ.
ಇಲ್ಲಿಗೆ ಆಗಮಿಸುವ ವಿವಿಧ ಮಾದರಿಯ ಅಥಿಥಿಗಳಾದ ಮಕ್ಕಳು, ಪೋಷಕರು, ಯಾತ್ರಿಕರು, ಚಾರಣಿಗರಿಗೆ ಬೇಸರಗೊಳ್ಳಲು ಯಾವುದೇ ಅವಕಾಶವನ್ನು ನೀಡದೇ, ಕ್ರಿಯಾಶೀಲರಾಗಿರಲು ಯಾವುದಾದರು ಚಟುವಟಿಕೆಗಳನ್ನು ಆಯೋಜಿಸುತ್ತೇವೆ. ಪ್ಯಾರಾಡೈಸ್‍ನಲ್ಲಿ ವಿವಿಧ ಮಾದರಿಯ ಒಳಾಂಗಣ ಆಟಗಳಾದ ಟೆನ್ನಿಸ್ ಕೋರ್ಟ್, ಬಾಸ್ಕೆಟ್ ಕೋರ್ಟ್, ಸೈಕ್ಲಿಂಗ್ ಹಾಗೂ ಮುಂತಾದ ಚಟುವಟಿಕೆಗಳನ್ನು ಹೊಂದಿರುತ್ತದೆ. ಒಂದು ವೇಳೆ ನೀವು ರಜಾ ದಿನಗಳಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ಮಾಡದೇ ಕೇವಲ ವಿಶ್ರಾಂತಿಯನ್ನು ಬಯಸುವುದಾದರೆ ನಮ್ಮ ರೆಸಾರ್ಟ್‍ನಲ್ಲಿ ಸ್ನೇಹಶೀಲ ಕೊಠಡಿಗಳು ಮತ್ತು ರೆಸಾರ್ಟ್‍ನ ಸುತ್ತಮುತ್ತಲಿನ ಪರಿಸರವು ನಿಮಗೆ ಸಹಾಯಕವಾಗಿದೆ.
ನಮ್ಮ ರೆಸಾರ್ಟ್‍ನಲ್ಲಿ ಪ್ರತ್ಯೇಕ ಸಸ್ಯಹಾರಿ ಮತ್ತು ಮಾಂಸಹಾರಿ ರೆಸ್ಟೋರೆಂಟ್ ಲಭ್ಯವಿದ್ದು, ಅತಿಥಿಗಳಿಗೆ ಪ್ರೀತಿ ಮತ್ತು ಕಾಳಜಿಯಿಂದ ರುಚಿಯಾದ ಅಡುಗೆಯನ್ನು ತಯಾರಿಸಿ ನೀಡಲಾಗುವುದು.
ರೆಸಾರ್ಟ್‍ಗೆ ಆಗಮಿಸುವ ಸಸ್ಯಹಾರಿ ಅತಿಥಿಗಳಿಗೆ ಮಾಲ್ಗುಡಿ ಕೆಫೆ ಯು ದಕ್ಷಿಣ ಭಾರತದ ಅತ್ಯಂತ ರುಚಿಯಾದ ಆಹಾರವನ್ನು ತಯಾರಿಸಿ ನೀಡುತ್ತದೆ ಹಾಗೂ ಮಾಂಸಹಾರಿ ಅತಿಥಿಗಳಿಗೆ ಸೀಶೆಲ್ಸ್ ರೆಸ್ಟೋರೆಂಟ್ ನವರು ಕರಾವಳಿ ಸಮುದ್ರ ಪ್ರದೇಶದ ಮಾದರಿಯಲ್ಲಿ ಆಹಾರವನ್ನು ತಯಾರಿಸಿ ಒದಗಿಸುತ್ತದೆ. ಎಲ್ಲ ಸಮುದ್ರದ ಆಹಾರಗಳು ಮಲ್ಪೆ ಬಂದರಿನಿಂದ ಸರಬರಾಜು ಮಾಡಿಕೊಳ್ಳುವುದರಿಂದ ತಾಜಾತನವನ್ನು ಹೊಂದಿರುತ್ತದೆ.
ನೀವು ನಿಮ್ಮ ರಜಾ ದಿನಗಳನ್ನು ಪರ್ವತವಿರುವ ಭೂ ಪ್ರದೇಶಗಳಲ್ಲಿ ಕಳೆಯಲು ಬಯಸಿದರೆ, ಕರ್ನಾಟಕದ ಕೊಡಚಾದ್ರಿಯಲ್ಲಿರುವ ಸುಂದರವಾದ ಪ್ಯಾರಾಡೈಸ್ ರೇಸಾರ್ಟ್‍ಗೆ ಭೇಟಿ ನೀಡಿ. ಇದು ಬೆಂಗಳೂರಿನಿಂದ ಕೇವಲ 400 ಕಿ.ಮೀ ದೂರ ಹಾಗೂ ಉಡುಪಿಯಿಂದ ಪ್ರಯಾಣವಾಗಿದ್ದು, ಇದು ಕರ್ನಾಟಕದ ನೈಸರ್ಗಿಕ ಪರಂಪಡೆ ಮತ್ತು ಸೌಂದರ್ಯವನ್ನು ಅನ್ವೇಷಿಸುವ ಪ್ರಯಾಣಿಕರಿಗೆ ಸೂಕ್ತವಾದ ಸ್ಥಳವಾಗಿದೆ.